ಇಂದು ಸಂಜೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

(ನ್ಯೂಸ್ ಕಡಬ) newskadaba.com ನವದೆಹಲಿ, ಅ.20: ಇಂದು ಸಂಜೆ 6 ಗಂಟೆಗೆ ನರೇಂದ್ರ ಮೋದಿಯವರು ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು ಮಹತ್ವದ ಘೋಷಣೆಯನ್ನು ಪ್ರಕಟಿಸುವ ನಿರೀಕ್ಷೆ ಇದೆ. ನವರಾತ್ರಿ ಸಂದರ್ಭದಲ್ಲಿ ಪ್ರಾಧಾನಿಯವರು ದೇಶ ವಾಸಿಗಳಿಗೆ ಶುಭ ಸುದ್ದಿಯೊಂದಿಗೆ ನೀಡಲಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ.

 

 

ದೇಶ ಕೊರೊನಾ ಸೋಂಕಿಗೆ ತುತ್ತಾದ ಬಳಿಕ ಪ್ರಧಾನಿ ಮೋದಿ ಹಲವು ಬಾರಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಇದೀಗ ಇಂದು ಸಂಜೆ ದೇಶಕ್ಕೆ ಸಂದೇಶವನ್ನು ನೀಡಲಿದ್ದೇನೆ ಎಂಬ ಪ್ರಧಾನಿ ಮೋದಿ ಟ್ವೀಟ್ ಕುತೂಹಲವನ್ನು ಇಮ್ಮಡಿಗೊಳಿಸಿದೆ.ದೇಶದಲ್ಲಿ ಕೊಂಚ ಪ್ರಮಾಣದಲ್ಲಿ ಕೊರೊನಾ ಸೋಂಕಿನ ಪ್ರಭಾವ ಕಡಿಮೆಯಾಗುತ್ತಿದ್ದು, ಜನಸಾಮಾನ್ಯರಿಗೂ ಕೊರೊನಾ ಲಸಿಕೆ ತಲುಪಿಸುವ ಬಗ್ಗೆ ಮಾಹಿತಿ ನೀಡಲಿದ್ದಾರಾ ಅಥವಾ ದೇಶದ ಜನರಿಗೆ ಡಿಜಿಟಲ್ ಐಡಿ ನೀಡುವ ಬಗ್ಗೆ ಮಾತನಾಡಲಿದ್ದಾರಾ ಎಂಬ ಹಲವಾರು ನಿರೀಕ್ಷೆಗಳು ಮೂಡಿವೆ.

Also Read  ಅಕ್ರಮ ಗೋ-ಸಾಗಾಟ - ನಾಲ್ವರ ಬಂಧನ..!

 

error: Content is protected !!
Scroll to Top