ಭಟ್ಕಳ: 40 ಲಕ್ಷ ರೂ. ಮೌಲ್ಯದ ಆಭರಣ ಕಳವು ➤ ಅರ್ಚಕ ನಾಪತ್ತೆ

(ನ್ಯೂಸ್ ಕಡಬ) newskadaba.com ಭಡ್ಕಳ, ಅ.20: ಭಕ್ತರು ದೇಣಿಗೆ ರೂಪದಲ್ಲಿ ದುರ್ಗಪರಮೇಶ್ವರಿ ದೇವಸ್ಥಾನಕ್ಕೆ ನೀಡಿದ ಸುಮಾರು 40 ಲಕ್ಷ ರೂ. ಮೌಲ್ಯದ ಆಭರಣಗಳು ಕಳುವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ  ಕಳೆದ ದಿನ ರಾತ್ರಿ ನಡೆದಿದೆ.

 

 

ದೇವಾಲಯದಲ್ಲಿ ಕೆಲಸ ಮಾಡುತ್ತಿದ್ದ ಅರ್ಚಕ ಸಹ ನಾಪತ್ತೆಯಾಗಿದ್ದಾನೆ ಎಂದು ದೇವಾಲಯದ ಅಧಿಕಾರಿಗಳು ದೂರಿನಲ್ಲಿ ತಿಳಿಸಿದ್ದಾರೆ. ನಾಪತ್ತೆಯಾದ ಅರ್ಚಕನನ್ನು ಯೆಲ್ಲಾಪುರ ನಿವಾಸಿ ಸತೀಶ್ ಭಟ್ ಎಂದು ಗುರುತಿಸಲಾಗಿದೆ. ದೇವರಿಗೆ ನವರಾತ್ರಿ ಸಮಯ ಆಭರಣಗಳನ್ನು ತೊಡಿಸಲು ದೇವಾಲಯದ ಪ್ರಧಾನ ಅರ್ಚಕರು ಆಭರಣ ಪೆಟ್ಟಿಗೆಯನ್ನು ತೆರೆದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ನಿಟ್ಟಿನಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಸತೀಶ್ ಭಟ್ ಪತ್ತೆಗಾಗಿ ಯೆಲ್ಲಾಪುರ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ.

Also Read  ಭಾರತ & ದಕ್ಷಿಣ ಆಫ್ರಿಕಾದ ಮೊದಲ ಟಿ20 ಪಂದ್ಯಕ್ಕೆ ಸಂಭಾವ್ಯ ತಂಡ ರಚನೆ

 

error: Content is protected !!
Scroll to Top