ರಾಷ್ಟ್ರೀಯ ಶಿಬಿರ ತೊರೆದು ದಿಡೀರ್ ಲಂಡನ್ ಗೆ ತೆರಳಿದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು

(ನ್ಯೂಸ್ ಕಡಬ) newskadaba.com ಲಂಡನ್, ಅ.20: ಬ್ಯಾಡ್ಮಿಂಟನ್ ತಾರೆ ಪಿ. ವಿ. ಸಿಂಧೂ ಒಲಿಂಪಿಕ್ ಗಾಗಿ ನಡೆಯುತ್ತಿರುವ ಶಿಬಿರ ತೊರೆದು ಲಂಡನ್ ಗೆ ತೆರಳಿದ್ದಾರೆ. ಒಲಿಂಪಿಕ್ ಶಿಬಿರವನ್ನು ಸಾಮಾನ್ಯವಾಗಿ ಯಾರೂ ಕೂಡಾ ಮಧ್ಯದಲ್ಲಿಯೇ ತೊರೆದು ಹೋಗವುದಿಲ್ಲ, ಅಲ್ಲದೇ ಇದೇ ಮೊದಲ ಬಾರಿಗೆ ತನ್ನ ಪೋಷಕರಿಲ್ಲದೆ ಪಿ. ವಿ. ಸಿಂಧೂ ಇಂಗ್ಲೆಂಡ್ ಗೆ ತೆರಳಿದ್ದಾರೆ.

 

 

ಚೇತರಿಕೆ ಮತ್ತು ಪುಷ್ಠಿಯ ಕೆಲಸಕ್ಕಾಗಿ ಇಂಗ್ಲೆಂಡ್ ಗೆ ತೆರಳಿರುವುದಾಗಿ ಪಿ. ವಿ. ಸಿಂಧೂ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ತಿಳಿಸಿದ್ದಾರೆ. ಇಂಗ್ಲೆಂಡ್ ನಲ್ಲಿ ಇನ್ನೂ ಹತ್ತು ದಿನಗಳ ಕಾಲ ಪಿ. ವಿ. ಸಿಂಧೂ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗ್ಯಾಟೋರೇಡ್ ಕ್ರೀಡಾ ವಿಜ್ಞಾನ ಸಂಸ್ಥೆಯ ರೆಬೆಕಾ ರಾಂಡೆಲ್ ಸೇರಿದಂತೆ ತಜ್ಞರ ತಂಡವು ಆಕೆಯ ಮೇಲೆ ನಿಗಾ ವಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ವಿಶ್ವದ ಮಾಜಿ ನಂಬರ್ 2 ಆಟಗಾರ್ತಿ ಮುಂದಿನ ಎರಡು ತಿಂಗಳು ಇಂಗ್ಲೆಂಡ್ ನಲ್ಲಿ ಇರುವ ನಿರೀಕ್ಷೆಯಿದೆ.

Also Read  ಬ್ರಿಜ್ ಭೂಷಣ್ ಸಿಂಗ್ ಚುನಾವಣಾ ಕಣದಿಂದ ಹೊರಕ್ಕೆ

 

 

error: Content is protected !!
Scroll to Top