ಐತ್ತೂರು: ನಿಕಟಪೂರ್ವ ಅಧ್ಯಕ್ಷ ಸತೀಶ್‌ ಕೆ. ರವರಿಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಕಡಬ, ಅ.20: ಐತ್ತೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬಜಕೆರೆ ಸಿಆರ್‌ಸಿ ಕಾಲೋನಿಗೆ ರಸ್ತೆ ಕಾಂಕ್ರಿಟೀಕರಣ, ಬಸ್ಸು ತಂಗುದಾಣ, ಅಂಗನವಾಡಿ ಕಟ್ಟಡ, ಬೀದಿದೀಪ, ಕಡಿಯುವ ನೀರು, ಸೋಲಾರ್‌ ದೀಪ ಅಳವಡಿಕೆ, ವಿದ್ಯುತ್‌ ಸಂಪರ್ಕ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸ ಮಾಡಿದ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಸತೀಶ್‌ ಕೆ. ರವರಿಗೆ ಕಾಲೋನಿ ನಿವಾಸಿಗಳಿಂದ ಸನ್ಮಾನ ಕಾರ್ಯಕ್ರಮ ಇಂದು ಬಜಕೆರೆ ಕಾಲೋನಿಯಲ್ಲಿ ನಡೆಯಿತು.

 

 

ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೋನಿಯ ಹಿರಿಯರಾದ ಸೋಲಮುತ್ತು ಹಾಗೂ ಶಿವಲಿಂಗರವರು ನೆರವೇರಿಸಿದ್ದರು. ಬಜಕೆರೆ ಶ್ರೀ ರಾಮ ದೇವಾಲಯದ ಅಡಳಿತ ಸಮಿತಿಯ ಅಧ್ಯಕ್ಷ ರಾಮನ್‌ ರವರು ಗ್ರಾಮಸ್ಥರ ಪರವಾಗಿ ಸನ್ಮಾನ ನೆರೆವೇರಿಸಿದರು. ಕಾರ್ಯಕ್ರಮದಲ್ಲಿ ಕಾಲೋನಿಯ ಹಲವಾರು ಮುಖಂಡರು ಉಪಸ್ಥಿತರಿದ್ದರು. ಕಲ್ಪನಾ ಮತ್ತು ಕವನ ಪ್ರಾರ್ಥಿಸಿದರು. ಆರತಿ ಕಾರ್ಯಕ್ರಮವನ್ನು ಸ್ವಾಗತಿಸಿ, ಕವನ ರವರು ವಂದಿಸಿದರು. ಕಾರ್ಯಕ್ರಮಕ್ಕೆ ವಿಜಯಕಾಂತ್‌ ರವರು ಸಹಕರಿಸಿದರು.

Also Read  ವಿಶ್ವಪ್ರಸಿದ್ಧ ತಿರುಪತಿಯಲ್ಲಿಯೂ ಬಾಂಬ್ ಬೆದರಿಕೆ..!

 

 

error: Content is protected !!
Scroll to Top