ಪಬ್​ಜಿ ಆಡಬೇಡ ಅಂದಿದ್ದಕ್ಕೆ ಅಪ್ಪನ ಕತ್ತು ಸೀಳಿ ಬಿಟ್ಟ ಮಗ…!

(ನ್ಯೂಸ್ ಕಡಬ) newskadaba.com ಮೇರಠ್, ಅ.19: ಪಬ್​ಜಿ ಆಡಬೇಡ, ಅದು ಒಳ್ಳೆಯದಲ್ಲ ಎಂದು ಬುದ್ಧಿವಾದ ಹೇಳಿದ್ದಕ್ಕೆ ಕೇಳಿ ಕೇಳಿ ಕೆದರಿದ ಮಗ ಪಕ್ಕದಲ್ಲೇ ಇದ್ದ ಚೂರಿ ತಗೊಂಡು ಅಪ್ಪನ ಕತ್ತು ಸೀಳಿಯೇ ಬಿಟ್ಟ! ಇಂಥದ್ದೊಂದು ವಿಲಕ್ಷಣ ಕೃತ್ಯ ಮೇರಠ್ ಜಿಲ್ಲೆಯ ಖಾರ್​ಖೋಡ ಪಟ್ಟಣದ ಜಾಮ್​ನಗರ ಎಂಬಲ್ಲಿ ನಡೆದಿದೆ. ಆರೋಪಿಯನ್ನು ಆಮಿರ್ ಎಂದು ಗುರುತಿಸಲಾಗಿದೆ.

 

 

ಈ ಕೃತ್ಯ ಗುರುವಾರವೇ ನಡೆದಿದೆ. ಆದರೆ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಸುದೀರ್ಘ ಹೊತ್ತು ಗೇಮ್​ನಲ್ಲೇ ಕಾಲಕಳೆಯುತ್ತಿದ್ದ ಆಮಿರ್​ಗೆ ಈ ಬಗ್ಗೆ ಅಪ್ಪ ಇರ್ಫಾನ್​ ತಾಕೀತು ಮಾಡಿದ್ದು ಕೆರಳಿಸಿತ್ತು. ಪದೇಪದೆ ಟೀಕೆಯಿಂದ ಬೇಸತ್ತಿದ್ದ ಆಮಿರ್​, ಸಮೀಪದಲ್ಲೇ ಚೂರಿ ಎತ್ತಿಕೊಂಡು ಇರ್ಫಾನ್ ನ ಕತ್ತಿನ ಮೇಲೆ ಹಲವು ಬಾರಿ ಚುಚ್ಚಿದ್ದಾನೆ. ಬಳಿಕ ತನ್ನ ಕತ್ತನ್ನೂ ಕುಯ್ದುಕೊಂಡಿದ್ದಾನೆ. ಇಬ್ಬರ ಸ್ಥಿತಿಯೂ ಗಂಭೀರವಾಗಿದ್ದು, ಮೇರಠ್ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ. ಆಮಿರ್ ಮಾದಕ ವ್ಯಸನಿಯಾಗಿದ್ದ. ಅದಕ್ಕೆ ಚಿಕಿತ್ಸೆಯೂ ನಡೆಯುತ್ತಿದ್ದು, ಅದರ ನಡುವೆ ಹೀಗಾಗಿದೆ ಎಂಬ ವಿವರಣೆಯನ್ನು ಕುಟುಂಬ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ.

Also Read  ಟ್ಯೂಷನ್ ಜೊತೆಗೆ ಪ್ರೇಮಪಾಠ ಹೇಳಿಕೊಟ್ಟ ಟೀಚರ್..! ➤ ಬಳಿಕ ಮಾಡಿದ್ದೇನು ಗೊತ್ತೇ..?

 

error: Content is protected !!
Scroll to Top