ಬೆಂಗಳೂರು: ದಾವಣಗೆರೆ ಪ್ರಸಿದ್ಧ ಬೆಣ್ಣೆದೋಸೆ ಹೋಟೆಲ್‌ನಲ್ಲಿ ಬೆಂಕಿ ಅವಘಡ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.19: ಉದ್ಯಾನ ನಗರಿ ಬೆಂಗಳೂರಿನ ನಗರದ  ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದ ಬಳಿ ಇರುವ ಪ್ರಸಿದ್ಧ ದಾವಣಗೆರೆ ಬೆಣ್ಣೆದೋಸೆ ಹೋಟೆಲ್‌ ಒಂದರಲ್ಲಿ ಇಂದು ಬೆಂಕಿ ಕಾಣಿಸಿಕೊಂಡಿದೆ.

 

 

ಎಂದಿನಂತೆ ಬೆಳಗ್ಗೆ ವ್ಯಾಪಾರ ವಹಿವಾಟನ್ನು ಹೋಟೆಲ್‌ನಲ್ಲಿ ಆರಂಭಿಸಲಾಗಿತ್ತು. ಈ ಹೋಟೆಲ್ ಪಕ್ಕದಲ್ಲಿಯೇ ಮೈಸೂರು ಬ್ರಾಹ್ಮಿನ್ಸ್‌ ಕೆಫೆ ಎಂಬ ಹೋಟೆಲ್ ಕೆಲವು ದಿನಗಳ ಹಿಂದೆ ಆರಂಭವಾಗಿತ್ತು. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿರಬಹುದು ಎಂದು ಅಂದಾಜಿಸಲಾಗಿದೆ. ದಶಕಗಳ ಕಾಲದಿಂದ ದಾವಣಗೆರೆ ಬೆಣ್ಣೆದೋಸೆ ಹೋಟೆಲ್ ನೆಟ್ಟಕಲ್ಲಪ್ಪ ವೃತ್ತದ ಬಳಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ವಿವಿಧ ಪ್ರದೇಶಗಳ ಜನರು ದೋಸೆ ತಿನ್ನಲು ಇಲ್ಲಿಗೆ ಆಗಮಿಸುತ್ತಿದ್ದರು. ಬೆಂಕಿ ಹೊತ್ತಿಕೊಳ್ಳುವಾಗ ಹಲವು ಜನರು ದೋಸೆ ಸವಿಯುತ್ತಿದ್ದರು. ಬೆಂಕಿ ಹೊತ್ತಿಕೊಂಡಿದ್ದು ಗಮನಕ್ಕೆ ಬಂದ ಕೂಡಲೇ ದೂರ ಹೋದರು. ಕಟ್ಟಡದ ಪಕ್ಕದಲ್ಲಿಯೇ ಐಸಿಐಸಿಐ ಬ್ಯಾಂಕ್ ಎಟಿಎಂ ಕೂಡ ಇದೆ. ಘಟನೆಯಲ್ಲಿ ಯಾವುದೇ ಪ್ರಾಣ ಅಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿ ಆಗಮಿಸಿದ್ದು, ಘಟನೆಗೆ ಕಾರಣ ಏನು ಎಂಬುದುದಾಗಿ ತಿಳಿದು ಬಂದಿಲ್ಲ.

Also Read  ಮೇಯಲು ಬಿಟ್ಟಿದ್ದ ದನ ಕರುಗಳ ಕಳವು - ಪ್ರಕರಣ ದಾಖಲು

 

 

 

error: Content is protected !!
Scroll to Top