ಬಂಟ್ವಾಳ: ರಸ್ತೆ ಕಾಂಕ್ರೀಟಿಕರಣಕ್ಕೆ ಮಾಜಿ ಸಚಿವ ರಮಾನಾಥ ರೈ ಗಳಿಂದ ಶಿಲಾನ್ಯಾಸ

(ನ್ಯೂಸ್ ಕಡಬ) newskadaba.com ಬಂಟ್ವಾಳ , ಅ.18: ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮದ್ವ ದಿಂದ ಮಧ್ವ ಗುತ್ತು ಎಂಬಲ್ಲಿಗೆ ರಸ್ತೆ ಕಾಂಕ್ರೀಟಿಕರಣಕ್ಕೆ 1 ಲಕ್ಷ ವೆಚ್ಚದ ರಸ್ತೆಯ ಕಾಮಗಾರಿಯನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ ರಮನಾಥ ರೈ ಯವರು ಇಂದು ನೆರೆವೇರಿಸಿದರು.

 

 

ತಾಲೂಕು ಪಂಚಾಯತ್ ಅನುದಾನದಿಂದ ತಾಲೂಕ್ ಪಂಚಾಯತ್ ಸದಸ್ಯರಾದ ಶ್ರೀಮತಿ ಧನಲಕ್ಷ್ಮಿ ಬಂಗೇರ ರವರ ಅನುದಾನದಿಂದ 1 ಲಕ್ಷ ವೆಚ್ಚದ ರಸ್ತೆಯ ಕಾಮಗಾರಿಯ ಶಿಲಾನ್ಯಾಸವನ್ನು ನೆರೆವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್,ಬಂಟ್ವಾಳ ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್,ಚಂದ್ರಶೇಖರ ಕರ್ಣ ಉದಯ ಪೂಜಾರಿ, ಮಹಮ್ಮದ್ ಶರೀಫ್, ಚಂದ್ರಹಾಸ ಶೆಟ್ಟಿ,ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಭವಾನಿ,ರಾಮಣ್ಣ ಶೆಟ್ಟಿ ಮದ್ವಕಟ್ಟೆ,ಮೊಂಟಾಗೌಡ, ಮೊಹಮ್ಮದ್ ಹನೀಫ್,ಶ್ರೀಮತಿ ಆಶಾ ಪೂಜಾರಿ, ಪದ್ಮನಾಭ ಪೂಜಾರಿ ಖಂಡಿತ ಗೊತ್ತು, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣ ಸಂಯೋಜಕರಾದ ಪದ್ಮನಾಭ ಸಾಮಂತ್ ಮೊದಲಾದವರು ಉಪಸ್ಥಿತರಿದ್ದರು.

Also Read  ಬೆಳ್ಳಾರೆ: ಸ್ನಾನಕ್ಕೆಂದು ನದಿಗಿಳಿದ ವ್ಯಕ್ತಿ ನೀರುಪಾಲು

 

error: Content is protected !!
Scroll to Top