ಮೈಸೂರು: ಅಭಿಮನ್ಯುಗೆ ಮರದ ಅಂಬಾರಿ ತಾಲೀಮು

(ನ್ಯೂಸ್ ಕಡಬ) newskadaba.com ಮೈಸೂರು, ಅ.18: ವಿಶೇಷ ಆಕರ್ಷಣೆಯಾದ ಮೈಸೂರು ದಸರಾ  ಜಂಬೂ ಸವಾರಿಯ ದಿನ ಚಿನ್ನದ ಅಂಬಾರಿಯಲ್ಲಿ ನಾಡ ದೇವತೆ ಚಾಮುಂಡೇಶ್ವರಿ ದೇವಿಯ ಮೆರವಣಿಗೆ  ನಡೆಯಲಿದೆ. ಈ ಹಿನ್ನೆಲಯಲ್ಲಿ ಇಂದು  ಕ್ಯಾಪ್ಟನ್ ಅಭಿಮನ್ಯುಗೆ ಅಂಬಾರಿ ತಾಲೀಮು ನಡೆಸಲಾಯಿತು.

 

 

ಅಭಿಮನ್ಯು ಆನೆ 750 ಕೆ. ಜಿ. ತೂಕದ ಚಿನ್ನದ ಅಂಬಾರಿ ಹೊರಲಿರುವ ಹಿನ್ನೆಲೆಯಲ್ಲಿ ಮರದ ಅಂಬಾರಿ ಕಟ್ಟಿ, ಅಂಬಾರಿಯ ಜೊತೆಗೆ ಮರಳಿನ ಮೂಟೆಗಳನ್ನು ಹೊರೆಸಿ ಅರಮನೆ ಆವರಣದಲ್ಲಿ ತಾಲೀಮು ನಡೆಸಲಾಯಿತು ಎಂದು ಆನೆ ವೈದ್ಯ ಡಾ. ನಾಗರಾಜು ತಿಳಿಸಿದ್ದಾರೆ. ವಿಜಯದಶಮಿ ಜಂಬೂಸವಾರಿ ಮೆರವಣಿಗೆ ಅ.26ರಂದು ನಡೆಯಲಿದ್ದು, ಇದಕ್ಕಾಗಿ ಅರಮನೆ ಆವರಣದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಆನೆಗಳಿಗೆ ಅಂಬಾರಿ ತಾಲೀಮು ನಡೆಸಲಾಯಿತು.

Also Read  ಸಿಟಿ ರವಿಗೆ ದಿಡೀರ್ ಅನಾರೋಗ್ಯ ➤ ಆಸ್ಪತ್ರೆಗೆ ದಾಖಲು

 

error: Content is protected !!
Scroll to Top