ಅಕ್ರಮ ಕೊಳಿ ಅಂಕಕ್ಕೆ ಪೊಲೀಸರ ದಾಳಿ ➤ ಆರೋಪಿಗಳು ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಬಳಕುಂಜೆ ಗುಡ್ಡೆ, ಅ.18: ಗುಡ್ಡೆಯಲ್ಲಿ ಅಕ್ರಮ ಕೋಳಿ ಅಂಕ ನಡೆಯುತ್ತಿರುವ ಸ್ಥಳಕ್ಕೆ ಮುಲ್ಕಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಬಳಕುಂಜೆ ಮೇಗಿನ ಮನೆ ನಿವಾಸಿ ನಿತ್ಯಾನಂದ ಶೆಟ್ಟಿ ಹಾಗೂ ಮಾಗಂದಡಿ ನಿವಾಸಿ ವಿಜಯಕುಮಾರ್‌ ಎಂದು ಗುರುತಿಸಲಾಗಿದೆ.

 

 

ಬಳಕುಂಜೆ ಸಮೀಪ ಈ ಕೋಳಿ ಅಂಕ ನಡೆಯುತ್ತಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಉಳಿದ 11 ಮಂದಿ ಪರಾರಿಯಾಗಿದ್ದಾರೆ. ಬಳಕುಂಜೆ ಗುಡ್ಡೆ ಪಡ್ಪು ಬಳಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದು, ಅಂಕ ಪ್ರೀಯರು ಪರಾರಿಯಾಗಿದ್ದು, ಹಲವರಿಗೆ ಗಾಯಾಗಳಾಗಿವೆ. ಬಂಧಿತ ಆರೋಪಿಗಳಿಂದ ಮುಲ್ಕಿ ಪೊಲೀಸರು 4 ಕೋಳಿ,4 ದ್ವಿಚಕ್ರ ವಾಹನ ಹಾಗೂ ಜೂಜಾಟಕ್ಕೆ ಬಳಸಿದ 9060 ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ನೆಟ್ ವರ್ಕ್ ಸಮಸ್ಯೆ ಬಗೆಹರಿಸುವಂತೆ ಶಾಸಕರಿಗೆ ಮೂರನೇ ಸುತ್ತಿನ ಅರ್ಜಿ

error: Content is protected !!
Scroll to Top