ಉಡುಪಿ: ಮದ್ದಳೆಯ ಮಾಂತ್ರಿಕ ಗೋಪಾಲ್ ರಾವ್ ನಿಧನ

(ನ್ಯೂಸ್ ಕಡಬ) newskadaba.com ಉಡುಪಿ, ಅ.18: ಮದ್ದಳೆಯ ಮಾಂತ್ರಿಕ, ಶತಾಯುಷಿ ಹಿರಿಯಡ್ಕ ಗೋಪಾಲ್ ರಾವ್ (101) ಅವರು ಕಳೆದ ದಿನ ರಾತ್ರಿ ಕೊನೆಯುಸಿರೆಳೆದಿದ್ದಾರೆ.

 

 

ಭಾರತದಲ್ಲಿ ಯಕ್ಷಗಾನ ಕಲಿಕೆಗೆ ಬಂದ ಪ್ರಥಮ ವಿದೇಶಿ ಮಹಿಳೆಯಾಗಿರುವ ಅಮೆರಿಕದ ಮಾರ್ತಾ ಆಸ್ಟಿನ್ ಅವರಿಗೆ, ಯಕ್ಷಗಾನದಲ್ಲಿ ಸಂಶೋಧನಾ ಪ್ರಬಂಧಕ್ಕೆ ಇವರು ಮಾರ್ಗದರ್ಶಕರಾಗಿದ್ದರು. ಅಲ್ಲದೇ ಅವರೊಂದಿಗೆ ಅಮೆರಿಕಕ್ಕೆ ತೆರಳಿ ಅಲ್ಲಿ ಯಕ್ಷಗಾನ ಪ್ರದರ್ಶನವನ್ನೂ ಕೂಡ ನೀಡಿದ್ದರು. ಇನ್ನು ಅವರು ಜಾನಪದ ಅಕಾಡೆಮಿ ಮತ್ತು ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದರು. ಅಲ್ಲದೇ ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದರು. ಸ್ವತಃ ನಾಟಿ ವೈದ್ಯರೂ ಆಗಿದ್ದ ಕಾರಣ ಗೋಪಾಲ ರಾವ್‌ ರವರಿಗೆ ಯಾವುದೇ ರೋಗ ಬಾಧೆ ಇರಲಿಲ್ಲ. ತಮ್ಮ ಕೊನೆಯುಸಿರೆಳೆಯುವ ತಕವೂ ಅವರು ಆರೋಗ್ಯವಾಗಿದ್ದರು. ಮೃತರು ಪುತ್ರನನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

Also Read  ಅಕ್ಟೋಬರ್ 29ಕ್ಕೆ ನರೇಂದ್ರ ಮೋದಿ ಧರ್ಮಸ್ಥಳಕ್ಕೆ ► ಕಾರ್ಯಕ್ರಮದ ಸಿದ್ದತೆಗಳ ಬಗ್ಗೆ ನಳಿನ್ ಕುಮಾರ್ ಕಟೀಲ್ ಪರಿಶೀಲನೆ

 

error: Content is protected !!
Scroll to Top