(ನ್ಯೂಸ್ ಕಡಬ) newskadaba.com ನವದೆಹಲಿ, ಅ.17: ಇಂದಿನಿಂದ ನವರಾತ್ರಿ ಹಬ್ಬದ ಸಂಭ್ರಮ ಆರಂಭಗೊಂಡಿದ್ದು, ಈ ಹಿನ್ನಲೆಯಲ್ಲಿ ದುರ್ಗಾ ಮಾತೆಯ ವಿವಿಧ ಅವತಾರಗಳನ್ನು ಶ್ರದ್ಧಾ, ಭಕ್ತಿಯಿಂದ ಪೂಜಿಸಲಾಗುವ ನವರಾತ್ರಿ ಹಬ್ಬ ಇಂದಿನಿಂದ ಆರಂಭಗೊಂಡಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿಯವರು ಟ್ವೀಟ್ ಮಾಡುವ ಮೂಲಕ ದೇಶದ ಜನತೆಗೆ ಶುಭಾಶಯಗಳನ್ನು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು. ತಾಯಿ ಜಗದಾಂಬಾ, ನಿಮ್ಮೆಲ್ಲರಿಗೂ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ನೀಡಲಿ. ಜೈ ಮಾತಾ ಕೀ! ಎಂದು ಹೇಳಿದ್ದಾರೆ. ಮತ್ತೊಂದು ಟ್ವೀಟ್ ನಲ್ಲಿ ನವರಾತ್ರಿಯ ಮೊದನ ದಿನ ನಾವು ಶೈಲಪುತ್ರಿಯನ್ನು ಆರಂಧನೆ ಮಾಡುತ್ತೇವೆ ಎಂದಿರುವ ಅವರು, ಶೈಲಪುತ್ರಿಗೆ ಸಂಬಂಧಿಸಿದ ಸ್ತುತಿಯೊಂದನ್ನು ಹಂಚಿಕೊಂಡಿದ್ದಾರೆ. ನವರಾತ್ರಿಯ ಮೊದಲ ದಿನ ಶೈಲಪುತ್ರಿಗೆ ಸಂಬಂಧಿಸಿದ್ದಾಗಿದ್ದು, ಮಾ ಶೈಲಪುತ್ರಿಗೆ ಪ್ರಣಾಮಗಳು. ತಾಯಿಯ ಆಶೀರ್ವಾದದಿಂದ, ನಮ್ಮ ಗ್ರಹವು ಸುರಕ್ಷಿತವಾಗಿ, ಆರೋಗ್ಯಕರವಾಗಿ ಮತ್ತು ಸಮೃದ್ಧವಾಗಿರಲಿ. ಶೈಲಪುತ್ರಿಯ ಆಶೀರ್ವಾದವು ಬಡ ಮತ್ತು ದೀನ ದಲಿತರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ನಮಗೆ ಶಕ್ತಿಯನ್ನು ನೀಡಲಿ ಎಂದು ತಿಳಿಸಿದ್ದಾರೆ.