ಮಂಗಳೂರು – ಮೈಸೂರು ನಡುವೆ ವಿಮಾನ ಸೇವೆ ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.16: ಮಂಗಳೂರಿನಿಂದ ಮೈಸೂರಿಗೆ ಅ. 25ರಿಂದ ವಿಮಾನ ಸೇವೆ ಪ್ರಾರಂಭಿಸಲು ಏರ್ ಇಂಡಿಯಾ ತೀರ್ಮಾನಿಸಿದೆ. ಏರ್ ಇಂಡಿಯಾ ಬೆಂಗಳೂರಿನಿಂದ ಮಂಗಳೂರಿಗೆ ಬೆಳಿಗ್ಗೆ 6.50ಕ್ಕೆ ಬರುವ ವಿಮಾನವೇ ಮೈಸೂರಿನ ಕಡೆ ಸಂಚರಿಸಲಿದೆ.

 

 

ಈ ವಿಮಾನ ಬೆಳಿಗ್ಗೆ 7.55ಕ್ಕೆ ಮೈಸೂರಿನಿಂದ ಹೊರಟು ಬೆಳಿಗ್ಗೆ 8.50ಕ್ಕೆ ಮಂಗಳೂರು ತಲುಪಲಿದೆ. ರಸ್ತೆ ಮತ್ತು ರೈಲು ಮೂಲಕ ಸಂಪರ್ಕ ಹೊಂದಿರುವ ಈ ಎರಡು ನಗರಗಳ ನಡುವೆ ವಿಮಾನ ಸೇವೆ ಪ್ರಾರಂಭಿಸುವಂತೆ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಹಾಗೂ ಕೆಲ ಕೈಗಾರಿಕೋದ್ಯಮಿಗಳು ವೈಮಾನಿಕ ಸಂಸ್ಥೆಗೆ ಮನವಿ ಮಾಡಿಕೊಂಡಿದ್ದರು.

Also Read  ಕ್ಲಸ್ಟರ್‌ ಹಂತದಲ್ಲೇ 5, 8ನೇ ತರಗತಿ ಮೌಲ್ಯಮಾಪನ

 

error: Content is protected !!
Scroll to Top