ಭಾರಿ ಮಳೆಗೆ ಮನೆ ಕುಸಿದ ಹಿನ್ನಲೆ ➤ ಸೂರು ಕಲ್ಪಿಸಿಕೊಂಡುವಂತೆ ಪಟ್ಟಣ ಪಂ. ಮತ್ತು ತಹಶೀಲ್ದಾರ್‌ ಗೆ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಅ.16: ಅ.14 ರಂದು ಸುರಿದ ಭಾರಿ ಮಳೆ ಹಾಗೂ ಗಾಳಿಗೆ ಕೋಡಿಂಬಾಳ ಗ್ರಾಮದ ಓತ್ರಂಡ್ಕ ಮಾಣಿಗ ರವರ ಮನೆ ಕುಸಿದು ಬಿದ್ದಿದೆ. ಇದರಿಂದ ಪರಿಹಾರಕ್ಕಾಗಿ ಸರಕಾರದಿಂದ ಸಹಾಯದನ ಒದಗಿಸಬೇಕಾಗಿ ಕಡಬ ಜೆ ಡಿ ಯಸ್‌ ಅಧ್ಯಕ್ಷ ಮೀರಾ ಸಾಹೇಬ್‌ ಆಗ್ರಹಿಸಿದ್ದಾರೆ.

 

 

ಸದ್ಯಕ್ಕೆ ಊರವರು ಟರ್ಪಲ್‌ ತೆಗೆದು ಕೊಟ್ಟಿದ್ದು ತಾತ್ಕಾಲಿಕ ವ್ಯವಸ್ಥೆ ಮಾಡಿರುತ್ತಾರೆ. ಕಡಬ ತಾಲೂಕು ತಹಶೀಲ್ದಾರ್‌ ಹಾಗೂ ಕಡಬ ಪಟ್ಟಣ ಪಂಚಾಯತ್‌ ಆಡಳಿತಧಿಕಾರಿಯಾಗಿರುವ ತಹಶೀಲ್ದಾರ್‌ ಅನಂತಶಂಕರ್‌ ರವರಿಗೆ ಮನವಿ ನೀಡಿದ್ದ ಕೋಡಿಂಬಾಳ ಗ್ರಾಮದ ಓಂತ್ರಡ್ಕ ಮಾಣಿಗರವರು ವಿನಂತಿಸಿಕೊಂಡಿದ್ದಾರೆ. ಮನವಿ ಸ್ವೀಕರಿಸಿದ ತಹಶೀಲ್ದಾರ್‌ ಸ್ಥಳ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಇವರೊಂದಿಗೆ ಜನಾರ್ಧನ ಓಂತ್ರಡ್ಕ, ರವಿ ಯಂ ರವರು ಉಪಸ್ಥಿತರಿದ್ದರು.

Also Read  ಗಾಂಜಾ, ಎಂ.ಡಿ.ಎಂ.ಎ ಸಹಿತ ನಾಲ್ವರು ಅರೆಸ್ಟ್

 

error: Content is protected !!
Scroll to Top