ಮರ್ಕಂಜ: ಹೆರಿಗೆ ವೇಳೆ ಮಹಿಳೆ ಮೃತ್ಯು ➤ ಮಗು ಕ್ಷೇಮ

(ನ್ಯೂಸ್ ಕಡಬ) newskadaba.com ಮರ್ಕಂಜ, ಅ.16: ಮರ್ಕಂಜದಿಂದ ಎರಡು ವರ್ಷಗಳ ಹಿಂದೆ ಪುತ್ತೂರಿನ ಕಾಪುವಿಗೆ ಮದುವೆಯಾಗಿದ್ದ ಮಹಿಳೆ ಕಳೆದ ದಿನ ಹೆರಿಗೆ ವೇಳೆ ಲೋ ಬಿಪಿ ಹಾಗೂ ರಕ್ತಸ್ರಾವ ಉಂಟಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಮರ್ಕಂಜ ಗ್ರಾಮದ ಬಳ್ಳಕ್ಕಾನ ಸುಬ್ಬಣ್ಣ ನಾಯ್ಕ ರವರ ಪುತ್ರಿ ಚಂದ್ರಕಲಾ (25) ಎಂದು ಗುರುತಿಸಲಾಗಿದೆ.

 

 

ಚಂದ್ರಕಲಾರವರನ್ನು ಪುತ್ತೂರು ತಾಲೂಕಿನ ಕಾವು ಬಳ್ಳಿಕಾನ ನಿವಾಸಿ ಪ್ರವೀಣ್‌ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಚಂದ್ರಕಲಾರವರು ಹೆರಿಗೆಗೆಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಹೆರೆಗೆ ಸಂದರ್ಭದಲ್ಲಿ ಲೋ ಬಿಪಿ ಮತ್ತು ತೀವ್ರ ರಕ್ತಸ್ರಾವ ಉಂಟಾಗಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಇದರಿಂದಾಗಿ ಚಿಕಿತ್ಸೆ ಫಲಕಾರಿಯಾಗದೇ ಕಳೆದ ದಿನ ಮೃತಪಟ್ಟಿದ್ದಾರೆ. ಆದರೇ ಅದೃಷ್ಟವಶಾತ್ ನಿಂದ ಮಗು ಮಾತ್ರ ಬದುಕುಳಿದಿದೆ.

Also Read  ಉಡುಪಿ: ಮಧ್ಯ ಸೇವನೆಗೆ ಹಣವಿಲ್ಲವೆಂದು ಮನನೊಂದು ವ್ಯಕ್ತಿ ಆತ್ಮಹತ್ಯೆ

 

error: Content is protected !!
Scroll to Top