ಉಪ್ಪಳಿಗೆಯಲ್ಲಿ ಶಾಲಾ ಬಾವಿ ಸಂಪೂರ್ಣ ಕುಸಿತ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.16: ಕಳೆದ ಕೆಲ ದಿನಗಳಿಂದ ನಿರಂತರವಾಗಿ ಎಡಬಿಡದೆ ಸುರಿದ ಧಾರಕಾರ  ಮಳೆಯಿಂದಾಗಿ ಇರ್ದೆ ಉಪ್ಪಳಿಗೆ  ಹಿ.ಪ್ರಾ. ಶಾಲಾ ಬಾವಿಯೊಂದು ಇಂದು  ಆವರಣಗೋಡೆ ಸಂಪೂರ್ಣ ಕುಸಿದು ಹೋಗಿದೆ.

 

 

ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗುವ ಸಂದರ್ಭದಲ್ಲಿ ಶಾಲಾ ಪರಿಸರದ ಮನೆಗಳ ನಿವಾಸಿಗಳೂ ಕುಡಿಯುವ ನೀರಿಗಾಗಿ ಇದೇ ಬಾವಿಯ ನೀರನ್ನು ಬಳುತ್ತಿದ್ದರು.  ಕಳೆದ ಸುಮಾರು 65 ವರ್ಷಗಳಿಂದ ಶಾಲೆಗೆ ಬಾವಿಯನ್ನು ಕುಡಿಯವ ನೀರಿಗೆ  ಹಾಗೂ ಅಕ್ಷರದಾಸೋಹ ದ ಬಳಕೆಗೆ ಬಾವಿಯಿಂದ ನೀರು ಮೇಲೆಕ್ಕೆತ್ತಲು ವಿದ್ಯುತ್‌ ಪಂಪ್‌ ಅಳವಡಿಸಲಾಗಿತ್ತು. ಆದರೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಎಡೆಬಿಡದೆ ಸುರಿದ ಧಾರಕಾರ ಮಳೆಯಿಂದಾಗಿ ಬಾವಿಯು ಸಂಪೂರ್ಣ ಕುಸಿದು ಬಿದ್ದಿದ್ದು, ಸುಮಾರು ರೂ. 2 ಲಕ್ಷ ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ.

Also Read  ದ. ಕ ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘ(ರಿ) ಮಂಗಳೂರು ➤ ನಿವೃತ್ತ ಸರಕಾರಿ ನೌಕರರ - ಮಹಾಸಭೆ/ಸನ್ಮಾನ

 

error: Content is protected !!
Scroll to Top