ಪತ್ತೂರು: ಹಿಂಬದಿ ಸವಾರರಿಗೂ ಇನ್ಮುಂದೆ ಹೆಲ್ಮೆಟ್‌ ಕಡ್ಡಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.16: ನ್ಯಾಯಾಲಯದ ಆದೇಶ ಹಾಗೂ ಮೇಲಾಧಿಕಾರಿಗಳ ನಿರ್ದೇಶದಂತೆ ಇನ್ನು ಮುಂದೆ ದ್ವಿಚಕ್ರ ವಾಹನಗಳಲ್ಲಿ ಸಹ ಸವಾರರಾಗಿ ಸಂಚರಿಸುವವರೂ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು. ತಪ್ಪಿದಲ್ಲಿ ದಂಡ ವಿಧಿಸಲಾಗುವುದು ಎಂದು ಸಂಚಾರ ಪೊಲೀಸ್‌ ಠಾಣಾ ಎಸ್.ಐ ತಿಳಿಸಿದ್ದಾರೆ.

 

 

ಕಡ್ಡಾಯವಾಗಿ ಹೆಲ್ಮೆಟ್‌ ಧರಿಸುವುದನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಮತ್ತು ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರು ಹೆಲ್ಮೆಟ್‌ ಧರಿಸದೇ ಸಂಚಾರಿಸುವುದು ಕಂಡು ಬಂದಲ್ಲಿ ದಂಡ ವಿಧಿಸಲಾಗುವುದು ಎಂದು ಸಂಚಾರಿ ಠಾಣಾ ಎಸ್‌.ಐ ರಾಮ ನಾಯ್ಕ ತಿಳಿಸಿದ್ದಾರೆ.

Also Read  'ಕೇಂದ್ರ ಸರ್ಕಾರ'ದಿಂದ ಕೋಟ್ಯಾಂತರ ಕಾರ್ಮಿಕರಿಗೆ ಸಿಹಿ ಸುದ್ದಿ ➤ 'ಹೊಸ ಯೋಜನೆ'ಗಳ ಆರಂಭಕ್ಕೆ 'ಇ-ಲೇಬರ್ ಪೋರ್ಟಲ್' ಪ್ರಾರಂಭ

 

 

error: Content is protected !!
Scroll to Top