ತಲಕಾವೇರಿ: ಕಾವೇರಿ ತೀರ್ಥೋದ್ಭವʼಗೆ ಕ್ಷಣಗಣನೆ..!

(ನ್ಯೂಸ್ ಕಡಬ) newskadaba.com ತಲಕಾವೇರಿ, ಅ.16: ಕೊಡವರ ಕುಲದೇವತೆ ಮಾತೆ ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡಲು ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಕೊರೋನಾ ಹಿನ್ನಲೆ ಈ ತೀರ್ಥೋದ್ಭವ ಜಾತ್ರೆಗೆ ಹೆಚ್ಚಿನ ಜನರು ಸೇರದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿದ್ದು, ಸರಳವಾಗಿ ಈ ಬಾರಿ ಕಾರ್ಯಕ್ರಮ ಆಚರಣೆ ಮಾಡಲು ಸೂಚನೆ ನೀಡಿದ್ದು, ಕೋವಿಡ್​ ಸುರಕ್ಷತೆ ಪಾಲಿಸುವುದು ಕಡ್ಡಾಯವಾಗಿದೆ. ತೀರ್ಥೋದ್ಭವದಲ್ಲಿ ಭಾಗಿಯಾಗುವ ಭಕ್ತರು ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್​ ಬಳಕೆ ಕಡ್ಡಾಯ. ತೀರ್ಥೋದ್ಭವಕ್ಕೆ ಈಗಾಗಲೇ ಎಲ್ಲಾ ಪೂಜಾ ವಿಧಿವಿಧಾನಗಳು ನಡೆಯುತ್ತಿವೆ.

 

 

ಇಂದು ಬೆಳಿಗ್ಗೆ ಭಾಗಮಂಡಲದಿಂದ ತಲಕಾವೇರಿಗೆ ಕಾವೇರಿ ಮಾತೆಯ ಚಿನ್ನಾಭರಣಗಳನ್ನು ಶಾಸ್ತ್ರೋಕ್ತವಾಗಿ ಕೊಂಡೊಯ್ಯಲಾಗಿದ್ದು, ನಾಳೆ (ಅಕ್ಟೋಬರ್ 17) ರಂದು ಬೆಳಿಗ್ಗೆ 7 ಗಂಟೆ 3 ನಿಮಿಷಕ್ಕೆ ಸರಿಯಾಗಿ ತೀರ್ಥೋದ್ಭವವಾಗಲಿದೆ. ಅರ್ಚಕ ಗೋಪಾಲ ಆಚಾರ್ ಅವರ ನೇತೃತ್ವದಲ್ಲಿ ಎಲ್ಲಾ ಪೂಜಾ ವಿಧಿವಿಧಾನಗಳು ನಡೆಯಲಿವೆ. ಪ್ರತೀ ಬಾರಿಯಂತೆ ಈ ಬಾರಿ ಕೊಳದಲ್ಲಿ ಸ್ನಾನ ಮಾಡಿ, ತೀರ್ಥ ಪ್ರೋಕ್ಷಣೆಗೆ ಅವಕಾಶ ನೀಡಿಲ್ಲ. ಪ್ರತ್ಯೇಕವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ನಿಲ್ಲಲು ಭಕ್ತರಿಗೆ ಅನುಕೂಲವಾಗುವಂತೆ ಈಗಾಗಲೇ ಪೊಲೀಸ್ ಇಲಾಖೆ ಬ್ಯಾರಿಕೇಡ್ ಗಳನ್ನು ಅಳವಡಿಸಿದ್ದು, ಎಚ್ಚರಿಕೆವಹಿಸಿದ್ದಾರೆ. ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಮಹಾಮಾರಿಯ ಆತಂಕದ ನಡುವೆ ಸರಳ ಮತ್ತು ಸಾಂಪ್ರದಾಯಿಕ ತೀರ್ಥೋದ್ಭವ ಜಾತ್ರಾ ಮಹೋತ್ಸವ ನಡೆಸಲು ಜಿಲ್ಲಾಡಳಿತ ಭಾರೀ ಕಟ್ಟೆಚ್ಚರ ವಹಿಸಿದೆ.

Also Read  ಸುಬ್ರಹ್ಮಣ್ಯ: ಹೊಡೆದಾಟ ಪ್ರಕರಣದಲ್ಲಿ ಗುರುಪ್ರಸಾದ್ ಪಂಜ ಅವರಿಗೆ ಜಾಮೀನು ► ನ್ಯಾಯಾಲಯಕ್ಕೆ ಹಾಜರಾಗದ ಚೈತ್ರಾ ವಿರುದ್ಧ ಗರಂ ಆದ‌ ನ್ಯಾಯಾಧೀಶರು ► ನ.05 ರಂದು ಆಂಬ್ಯುಲೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲು ಆದೇಶ

 

error: Content is protected !!
Scroll to Top