NCC ಕ್ಯಾಂಪ್‍ ಗೆ ತೆರಳಿದ್ದ ವಿದ್ಯಾರ್ಥಿ ನೀರು ಪಾಲು

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.25, NCC ಕ್ಯಾಂಪ್‍ಗೆ ತೆರಳಿದ್ದ ವಿದ್ಯಾರ್ಥಿಯೊಬ್ಬ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಕನಕಪುರದ ರಾವಗೊಂಡ್ಲು ಬೆಟ್ಟದ ಹತ್ತಿರ ಭಾನುವಾರ ನಡೆದಿದೆ.

ವಿಶ್ವಾಸ್ (17) ಸಾವನ್ನಪ್ಪಿರುವ ವಿದ್ಯಾರ್ಥಿ. ವಿಶ್ವಾಸ್ ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು, ಭಾನುವಾರದಂದು ಕಾಲೇಜಿನಿಂದ 25 ವಿದ್ಯಾರ್ಥಿಗಳನ್ನ ಎನ್‍ಸಿಸಿ ಕ್ಯಾಂಪ್‍ಗೆ ಕನಕಪುರದ ರಾವಗೊಂಡ್ಲು ಬೆಟ್ಟಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ 10 ಅಡಿಯ ಕಲ್ಯಾಣಿಗೆ ಬಿದ್ದು ವಿಶ್ವಾಸ್ ಸಾವನ್ನಪ್ಪಿದ್ದಾನೆ.

ಬೇರೆ ವಿದ್ಯಾರ್ಥಿಗಳು ಸೆಲ್ಫೀ ತೆಗೆದುಕೊಂಡ ಫೋಟೋಗಳಲ್ಲಿ ವಿಶ್ವಾಸ್ ಮುಳುಗುತ್ತಿರುವುದು ಕಾಣಿಸಿದರೂ ಯಾರೋಬ್ಬರು ಆತನ ನೆರವಿಗೆ ಧಾವಿಸದೇ ಇರೋದು ವಿಪರ್ಯಾಸ. ಕಾಲೇಜಿನ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ತಮ್ಮ ಮಗನ ಸಾವಿಗೆ ಕಾರಣ ಎಂದ ಪೋಷಕರು ಹಾಗೂ ಸಂಬಂಧಿಕರು ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದ್ದಾರೆ.

Also Read  ಶಾಸಕ ಅರವಿಂದ ಲಿಂಬಾವಳಿ ಹೆಸರು ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ..!!               

 

error: Content is protected !!
Scroll to Top