ಪುತ್ತೂರು ದಸರಕ್ಕೆ ಕೊರೋನಾ ಕಾರ್ಮೋಡ ➤ ಈ ಬಾರಿ ಪುತ್ತೂರು ದಸರ ರದ್ದು

(ನ್ಯೂಸ್ ಕಡಬ) newskadaba.com ಪುತ್ತೂರು, ಅ.15: ಸಾಂಸ್ಕೃತಿಕ ಉತ್ಸವ ಪುತ್ತೂರು ದಸರಾ ನಾಡಹಬ್ಬವನ್ನು ಈ ವರ್ಷ ಕೋವಿಡ್‌-19 ಮುನ್ನೆಚ್ಚರಿಕೆ ಕ್ರಮವಾಗಿ ರದ್ದುಗೊಳಿಸಲಾಗಿದೆ ಎಂದು ದಸರಾ ನಾಡಹಬ್ಬ ಸಮಿತಿ ಅಧ್ಯಕ್ಷ ಪಾಟೆಡ್ಕ ಕೃಷ್ಣ ಭಟ್‌ ರವರು ತಿಳಿಸಿದ್ದಾರೆ.

 

 

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಕಳೆದ ವರ್ಷ 67 ನೇ ದಸರಾ ನಾಡ ಹಬ್ಬ 8 ದಿನ ವಿಜೃಂಭಣೆಯಿಂದ ನಡೆದಿದೆ. ಈ ವರ್ಷ ಜಗತ್ತಿನಾದ್ಯಂತ ಕೊರೋನಾ ಛಾಯೆ ಇರುವ ಹಿನ್ನಲೆಯಲ್ಲಿ ಮುಂಜಾಗರೂಕತೆ ಮತ್ತು ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ಕಾರ್ಯಕ್ರಮ ರದ್ದುಗೊಳಿಸಲಾಗಿದ್ದು, ಮುಂದಿನ ವರ್ಷ ದಸರಾ ನಾಡಹಬ್ಬವನ್ನು ನಡೆಸುವುದೆಂದು ನಾಡಹಬ್ಬ ಸಮಿತಿ ಸಭೆಯಲ್ಲಿ ತೀರ್ಮಾನಿಸಿದ್ದಾರೆ.

Also Read  ಪರಿಸರದ ಸ್ವಚ್ಚತೆ ಕಾಪಾಡಿ ➤ ಡಾ| ಚೂಂತಾರು

 

error: Content is protected !!
Scroll to Top