ಸವಣೂರು: ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ► ಮನೆಮನೆಗೆ ಬೇಟಿ ನೀಡಿ ಮನವಿ

(ನ್ಯೂಸ್ ಕಡಬ) newskadaba.com ಸವಣೂರು,ಸೆ.25, ಇಲ್ಲಿನ ಗ್ರಾಮ ಪಂಚಾಯತ್, ಗ್ರಾಮ ವಿಕಾಸ ಸಮಿತಿ ಪಾಲ್ತಾಡಿ, ಶ್ರೀ ಸಿದ್ಧಿವಿನಾಯಕ ಸೇವಾ ಸಂಘ, ಅರುಂಧತಿ ಮಾತೃ ಮಂಡಳಿ, ಮಂಜುನಾಥನಗರ, ವಿವೇಕಾನಂದ ಯುವಕ ಮಂಡಲ ಮತ್ತು ಶ್ರೀಗೌರಿ ಯುವತಿ ಮಂಡಲ, ಮಂಜುನಾಥನಗರ ಇವುಗಳ ಜಂಟಿ ಆಶ್ರಯದಲ್ಲಿ ಅ.2ರಂದು ಬಂಬಿಲದಲ್ಲಿ ನಡೆಯುವ ಸ್ವಚ್ಚತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನೆಮನೆ ಬೇಟಿ ನೀಡಿ ಮನವಿ ಮಾಡಲಾಯಿತು.

ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಬಂಬಿಲ ಕ್ರಾಸ್ನಿಂದ ಗೌರಿ ಹೊಳೆಯ ತನಕದ ರಸ್ತೆಗಳ ರಿಪೇರಿ, ಹೊಂಡಗಳಿಗೆ ಕಾಂಕ್ರೀಟಿಕರಣ, ಪೊದರು ಸವರುವುದು ಮತ್ತು ಸ್ವಚ್ಚ ಪರಿಸರವನ್ನು ನಿರ್ಮಿಸುವ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಇತರ ಸ್ಥಳೀಯಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಕೈಜೋಡಿಸಲಿದ್ದು ಇದರ ಮನವಿ ಪತ್ರವನ್ನು ಮನೆಮನೆಗೆ ನೀಡಿ ಸಹಕರಿಸುವಂತೆ ವಿನಂತಿಸಲಾಯಿತು.

Also Read  ಗುತ್ತಿಗಾರು : ಸಿಕ್ಕಿಬಿದ್ದ ಚಿನ್ನದ ಸರವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಯುವಕ

ಈ ಸಂದರ್ಭದಲ್ಲಿ ಪಾಲ್ತಾಡಿ ಚೈತನ್ಯ ರೈತ ಶಕ್ತಿ ಗುಂಪಿನ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ, ವಿವೇಕಾನಂದ ಯುವಕ ಮಂಡಲದ ಗೌರವಾಧ್ಯಕ್ಷ ,ಗ್ರಾ.ಪಂ.ಮಾಜಿ ಸದಸ್ಯ ಸುಧೀರ್ ಕುಮಾರ್ ಕುಂಜಾಡಿ, ಸವಣೂರು ಗ್ರಾ.ಪಂ.ಸದಸ್ಯ ಸತೀಶ್ ಆಂಗಡಿಮೂಲೆ, ಸಿದ್ದಿವಿನಾಯಕ ಸೇವಾ ಸಂಘದ ಗೌರವಾಧ್ಯಕ್ಷ ಈಶ್ವರ ಕೆ.ಎಸ್, ಅಧ್ಯಕ್ಷ ಪ್ರವೀಣ್ ಬಂಬಿಲದೋಳ, ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷ ಪ್ರವೀಣ್ ಚೆನ್ನಾವರ, ಸಂಯೋಜಕ ಉದಯ ಬಿ.ಆರ್,ಸಂಸ್ಕಾರ ಪ್ರಮುಖ್ ಮಲ್ಲಿಕಾರ್ಜುನ್ ಬೇಲೂರು, ಶ್ರಮ ಸೇವಾ ಪ್ರಮುಖ್ ನಿತ್ಯಪ್ರಸಾದ್ , ಸತ್ಯಪ್ರಕಾಶ್, ತಾರೇಶ್, ಜಗದೀಶ್ ಮಂಜುನಾಥನಗರ, ದೀಕ್ಷಿತ್, ಶಿಕ್ಷಣ ಪ್ರಮುಖ್ ಪ್ರಶಾಂತ್ ಬಂಬಿಲದೋಳ ಮೊದಲಾದವರಿದ್ದರು.

Also Read  ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ರಾಜೇಶ್ ಬಿಂದಾಲ್, ಅರವಿಂದ್ ಕುಮಾರ್ ಪ್ರಮಾಣ ವಚನ!!                                             

 

error: Content is protected !!
Scroll to Top