ಮೂಡುಬಿದಿರೆ: ಗೋಮಯದಿಂದ ಹಣತೆ ರೂಪಿಸಿದ ವಿದ್ಯಾರ್ಥಿ

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಅ.15: ಪರಿಸರ ಸ್ನೇಹಿ ದೀಪಾವಳಿ ಆಚರಣೆಗಾಗಿ ರಾಷ್ಟ್ರೀಯ ಕಾಮಧೇನು ಆಯೋಗ ಗೋಮಯದಿಂದ (ಸಗಣಿ) ಹಣತೆ ತಯಾರಿಸುವ ಅಭಿಯಾನ ಕೈಗೆತ್ತಿಕೊಳ್ಳುವ ಮೊದಲೇ ಏಳನೇ ತರಗತಿ ವಿದ್ಯಾರ್ಥಿಯೋರ್ವ ಹಣತೆ ತಯಾರಿಸಿಯೇಬಿಟ್ಟಿದ್ದಾನೆ. ಈತ ಮೂಡುಬಿದಿರೆ ಜವಳಿ ಉದ್ಯಮಿ ಎಸ್.ಎನ್.ಬೋರ್ಕರ್-ಸ್ವಾತಿ ದಂಪತಿ ಪುತ್ರ.

 

 

ರೋಟರಿ ಸೆಂಟ್ರಲ್ ಸ್ಕೂಲ್‌ನ ಏಳನೇ ತರಗತಿಯ  ಸ್ಕೌಟ್ಸ್ ವಿದ್ಯಾರ್ಥಿಯಾಗಿದ್ದು, ಶಶಾಂಕ್ ಬೋರ್ಕರ್ ಸಗಣಿ ಜತೆ ಮೈದಾ ಬೆರೆಸಿ ಹಣತೆ ನಿರ್ಮಿಸಿದ್ದಾನೆ. ಒಂದೆರಡು ದಿನ ಚೆನ್ನಾಗಿ ಬಿಸಿಲಲ್ಲಿ ಒಣಗಿಸಿದ್ದರಿಂದ ಬಿದ್ದರೂ ಒಡೆಯುವುದಿಲ್ಲ. ಸಗಣಿ ಜತೆ ಅಕ್ಕಿ ಹುಡಿ ಬೆರೆಸಿ ಪೂರ್ಣ ದೇಸಿ ರೂಪದಲ್ಲೂ ಈ ಹಣತೆಗಳನ್ನು ರೂಪಿಸಿದ್ದಾನೆ.

Also Read  ಹವಾಮಾನ ಏರುಪೇರು; ಮಕ್ಕಳನ್ನು ಕಾಡುತ್ತಿದೆ ಜ್ವರ, ವಾಂತಿ-ಭೇದಿ

error: Content is protected !!
Scroll to Top