ಇಂದು ಸಂಜೆ (ಸೆ.25 ರಂದು) ಶರವೂರು ದೇವಾಸ್ಥಾನದಲ್ಲಿ ►”ಶ್ರೀರಾಮ ಪಟ್ಟಾಭಿಷೇಕ” ಯಕ್ಷಗಾನ ತಾಳ ಮದ್ದಳೆ

(ನ್ಯೂಸ್ ಕಡಬ) newskadaba.com ಕಡಬ,ಸೆ.25, ಆಲಂಕಾರು ಗ್ರಾಮದ ಶರವೂರು ಶ್ರೀ ದುರ್ಗಾಂಬ ಕಲಾ ಸಂಗಮ ವಾರ್ಷಿಕ ಯಕ್ಷಗಾನ ತಾಳಮದ್ದಳೆ ಕೂಟ ಮತ್ತು ಕಲಾ ಸಂಗಮದ ಹಿರಿಯ ಕಲಾವಿದ ದಿ|.ಎಸ್.ಪಿ. ಸೇಸಪ್ಪ ಶೆಟ್ಟಿಯವರ ಸ್ಮರಣಾರ್ಥವಾಗಿ ಇಂದು ಸಾಯಂಕಾಲ (ಸೆ.25 ರಂದು) ಅತಿಥಿ ಕಲಾವಿದ ಕೂಡುವಿಕೆಯಲ್ಲಿ ಶ್ರೀರಾಮ ಪಟ್ಟಾಭಿಷೇಕ ಎಂಬ ಯಕ್ಷಗಾನ ತಾಳ ಮದ್ದಳೆ ಶರವೂರು ದೇವಾಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.

ಭಾಗವತರಾಗಿ ಪದ್ಯಾಣ ಗಣಪತಿ ಭಟ್, ಚೆಂಡೆ-ಮದ್ದಳೆ ವಿನಯ ಆಚಾರ್ಯ ಕಡಬ, ಶ್ರೀಶ ರಾವ್ ನಿಡ್ಲೆ ನಿರ್ವಹಿಸಲಿದ್ದಾರೆ. ಡಾ|.ಎಂ. ಪ್ರಭಾಕರ ಜೋಷಿ, ಶಂಭುಶರ್ಮ ವಿಟ್ಲ, ಸರ್ಪಂಗಳ ಈಶ್ವರ ಭಟ್, ಗಣರಾಜ್ ಕುಂಬ್ಳೆ, ಚಂದ್ರಶೇಖರ ಆಲಂಕಾರು ಕಲಾವಿದರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

Also Read  ಮಂಗಳೂರು: 11 ಕೆ.ಜಿ. ಗಾಂಜಾ, 14 ಮಿ.ಗ್ರಾಂ MDMI ಸಹಿತ ಮಾದಕ ವಸ್ತುಗಳ ನಾಶ..!

 

error: Content is protected !!
Scroll to Top