ಭಟ್ಕಳ: ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಬುಲೆಟ್‌ ಟ್ಯಾಂಕರ್.!

(ನ್ಯೂಸ್ ಕಡಬ) newskadaba.com ಭಟ್ಕಳ, ಅ.14: ಪಟ್ಟಣದ ಕೋಟೇಶ್ವರ ನಗರ ಸಮೀಪದ ನಿಶಾಂತ್‌ ನರ್ಸಿಂಗ್‌ ಹೋಮ್‌ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಅನಿಲ ಸಾಗಾಟದ ಬುಲೆಟ್‌ ಟ್ಯಾಂಕರ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದ ಘಟನೆ ನಡೆದಿದೆ. ಟ್ಯಾಂಕರ್‌ ಚಾಲಕನನ್ನು ಜಾರ್ಖಂಡ್‌ ಮೂಲದ ಅಜಯ್‌ ಯಾದವ್‌ (25) ಎಂದು ಗುರುತಿಸಲಾಗಿದೆ.

ಎಚ್‌ ಪಿ ಕಂಪೆನಿಗೆ ಸೇರಿದ ಈ ಖಾಲಿ ಟ್ಯಾಂಕರ್‌ ಗೋವಾದಿಂದ ಮಂಗಳೂರಿನ ಕಡೆಗೆ ಅನಿಲ ತುಂಬಿಸಿಕೊಳ್ಳಲು ಮಂಗಳೂರಿನತ್ತ ತೆರಳುತ್ತಿತ್ತು ಎನ್ನಲಾಗಿದೆ. ಸ್ಥಳಕ್ಕೆ ಭಟ್ಕಳ ನಗರ ಠಾಣೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉರುಳಿಬಿದ್ದ ಟ್ಯಾಂಕರ ಮೇಲೆಕ್ಕೆತ್ತುವ ಕಾರ್ಯಚರಣೆ ನಡೆಸಲು ಮುಂದಾಗಿದ್ದಾರೆ.  ಚಾಲಕನಿಗೆ ಯಾವುದೇ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ.

Also Read  ಆ.30ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ

error: Content is protected !!
Scroll to Top