ಸಂಪತ್‌ ಕುಮಾರ್‌‌ ಹತ್ಯೆ ಪ್ರಕರಣ ➤ ಮತ್ತೆ 3 ಆರೋಪಿಗಳ ಅರೆಸ್ಟ್‌

(ನ್ಯೂಸ್ ಕಡಬ) newskadaba.com ಸುಳ್ಯ, ಅ.14: ಕಲ್ಲುಗುಂಡಿ ಸಂಪತ್‌ ಕುಮಾರ್‌‌ ಹತ್ಯೆಗೆ ಸಂಬಂಧಿಸಿದಂತೆ, ಕೊಲೆಗಾರರಿಗೆ ಬಂದೂಕು ಸರಬರಾಜು ಮಾಡಿದ ಇಬ್ಬರು ವ್ಯಕ್ತಿಗಳನ್ನು ಹಾಗೂ ಅವರ ಕಾರನ್ನು ಬಾಡಿಗೆಗೆ ಪಡೆದ ಒಬ್ಬ ವ್ಯಕ್ತಿಯನ್ನು ಕಳೆದ ದಿನ ಪೊಲೀಸರು ಬಂಧಿಸಿದ್ದಾರೆ.

 

 

ಪ್ರಕರಣದ ಐದು ಪ್ರಮುಖ ಆರೋಪಿಗಳನ್ನು ಅ.11ರ ಭಾನುವಾರದಂದು ಬಂಧಿಸಲಾಗಿದ್ದು, ಸದ್ಯ ಬಂಧಿತ ಆರೋಪಿಗಳ ಸಂಖ್ಯೆ ಇದೀಗ ಎಂಟಕ್ಕೆ ಏರಿದೆ. ಹತ್ಯೆಗಾರರ ತಂಡಕ್ಕೆ ಬಂದೂಕು ಒದಗಿಸಿದ್ದಾನೆ ಎಂದು ವರದಿಯಾಗಿದ್ದು, ಈ ಪೈಕಿ ಮೂವರನ್ನು ಮಡಿಕೇರಿಯಿಂದ ಬಂದ ರವೀಂದ್ರ, ಡಿಂಪಲ್‌‌ ಹಾಗೂ ಕಾರು ಒದಗಿಸಿದ ರಾಜೇಶ್‌ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇವರಿಗೆ ಅ.21ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Also Read  ವಶೀಕರಣ ತಂತ್ರ ವಿಧಾನದ ಲಾಭ ಮತ್ತು ದಿನ ಭವಿಷ್ಯ

 

error: Content is protected !!
Scroll to Top