ಶಿವಮೊಗ್ಗ: ಅಡಿಕೆಯಿಂದ ತಯಾರಾಯ್ತು ಶಾಂಪೂ….!

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಅ.14: ಅಡಕೆ ಟೀ ತಯಾರಿಸುವ ಮೂಲಕ ದೇಶದ ಗಮನ ಸೆಳೆದಿದ್ದ ಶಿವಮೊಗ್ಗ ಜಿಲ್ಲೆ ಇದೀಗ ಅಡಿಕೆಯಿಂದ ಶಾಂಪೂ ತಯಾರಾಗಿದೆ.

 

 

ಶಿವಮೊಗ್ಗ ಜಿಲ್ಲೆಯ ಮಂಡಗದ್ದೆಯ ಯುವ ಉದ್ಯಮಿ ನಿವೇದನ್‌ ನೆಂಪೆ ರವರು ಈಗ ಅಡಕೆ ಶಾಂಪೂ ಸಂಶೋಧಿಸುವ ಹೊಸ ಪ್ರಯೋಗವನ್ನು ಮಾಡಿದ್ದಾರೆ. ಚಾಲಿ ಅಡಿಕೆಯಲ್ಲಿ ಪ್ರೊಲೀನ್‌ ಎಂಬ ಆಂಟಿ ಏಜೆಂಗ್‌ ಇದ್ದು, ಇದು ದೇಹದಲ್ಲಿನ ಸುಕ್ಕವನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೆ ಗ್ಯಾಲಿಕ್‌ ಆಸಿಡ್‌ ಎಂಬ ಆಂಟಿ ಫಂಗಲ್‌ ಇದ್ದು, ಇದು ಜೆಮ್‌ರ್ಗಗಳನ್ನು ಸಾಯುಸುತ್ತದೆ. ಈ ಅಂಶಗಳನ್ನು ಅಡಿಕೆಯಿಂದ ಪ್ರತ್ಯೇಕಿಸಿ ಈ ಶಾಂಪೂ ತಯಾರಿಸಲಾಗುತ್ತದೆ ಎಂದು ನಿವೇದನ್‌ ರವರು ಹೇಳಿದ್ದಾರೆ. ಇವರ ವಿನೂತನ ಪ್ರಯೋಗಗಳಿಂದ ಭವಿಷ್ಯದಲ್ಲಿ ಅಡಿಕೆಗೆ ಭಾರಿ ಬೇಡಿಕೆ ಬರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ ಒಟ್ಟಿನಲ್ಲಿ ಅಡಿಕೆ ಬೆಳೆಗಾರರಲ್ಲಿ ಮಂದಹಾಸ ಮೂಡಿದಂತಾಗಿದೆ.

Also Read  ಕೇಂದ್ರ ಸಚಿವರಿಗಾಗಿ ಕಾದು ತಡವಾಗಿ ಹೊರಟ ವಿಮಾನ ► ಸಚಿವರನ್ನು ತರಾಟೆಗೆ ತೆಗೆದುಕೊಂಡ ವೈದ್ಯೆ

 

error: Content is protected !!
Scroll to Top