6 ತಿಂಗಳ ನಂತರ ಚಿತ್ರಮಂದಿರಗಳು ನಾಳೆ ಓಪನ್

(ನ್ಯೂಸ್ ಕಡಬ) newskadaba.com ಚಿತ್ರಮಂದಿರ, ಅ.14: ಕೊರೊನಾ ಕಾರಣಕ್ಕೆ ಕಳೆದ ಆರು ತಿಂಗಳಿಗೂ ಅಧಿಕ ಕಾಲದಿಂದ ಬಂದ್‌ ಆಗಿದ್ದ ಚಿತ್ರಮಂದಿರಗಳು ಅಕ್ಟೋಬರ್ 15ರ ನಾಳೆಯಿಂದ ಆರಂಭವಾಗುತ್ತಿವೆ.

 

 

ಕೊರೊನಾ ಹರಡದಂತೆ ತಡೆಯಲು ಕಠಿಣ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿದೆ. ಇದಕ್ಕಾಗಿ ಎಸ್‌ಒಪಿಯನ್ನು ಸಿದ್ಧಪಡಿಸಲಾಗಿದ್ದು, ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಕಡ್ಡಾಯವಾಗಿದೆ. ಸಿನೆಮಾ ಹಾಲ್‌ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೇವಲ ಶೇಕಡಾ 50 ರಷ್ಟು ಸೀಟುಗಳನ್ನು ಮಾತ್ರ ಪ್ರೇಕ್ಷಕರಿಗೆ ನೀಡಬೇಕು. ಪ್ರೇಕ್ಷಕರ ಮಧ್ಯೆ ಒಂದು ಸೀಟ್ ಅಂತರವಿರಬೇಕು ಮತ್ತು ಖಾಲಿ ಸೀಟ್ ಗುರುತಿಸುವುದು ಕಡ್ಡಾಯ. ಸಿನಿಮಾ ಹಾಲ್ ಒಳಗೆ ಸ್ಯಾನಿಟೈಜರ್ ವ್ಯವಸ್ಥೆ ಮಾಡಲಾಗುವುದು ಮತ್ತು ಪ್ರೇಕ್ಷಕರಿಗೆ ಮಾಸ್ಕ್ ಕಡ್ಡಾಯವಾಗಲಿದೆ. ಕೊರೊನಾದಿಂದ ರಕ್ಷಿಸಲು ಒಂದು ನಿಮಿಷದ ಜಾಗೃತಿ ವಿಡಿಯೋ ತೋರಿಸುವುದು ಕಡ್ಡಾಯವಾಗಿದೆ.

Also Read  ಉಡುಪಿಯಲ್ಲಿ ಗಾಂಜಾ ಸಾಗಾಟ ,ಮಾರಾಟ ಆರೋಪಿತರ ಪರೇಡ್ ➤ ಪೊಲೀಸ್ ವರಿಷ್ಠಾಧಿಕಾರಿಯಿಂದ ಆರೋಪಿಗಳಿಗೆ ಖಡಕ್ ವಾರ್ನಿಂಗ್

 

 

error: Content is protected !!
Scroll to Top