(ನ್ಯೂಸ್ ಕಡಬ) newskadaba.com ಮಂಗಳೂರು, ಅ.14: ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡ ವಾಯುಭಾರ ಕುಸಿತದ ಹಿನ್ನೆಲೆ ಕರಾವಳಿಯಲ್ಲಿ ಬಿರುಸುಗೊಂಡಿರುವ ಮಳೆ ದ.ಕ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಳೆದ ದಿನದಂದು ಬಿಡುವಿಲ್ಲದೆ ಮಳೆ ಸುರಿಯುತ್ತಿದೆ.
ಗುಡುಗು ಮಿಂಚು ಸಹಿತ ವ್ಯಾಪಕ ಮಳೆಯಾಗಿ ಕರಾವಳಿಯಲ್ಲಿ ನದಿಗಳ ಹರಿವು ಹೆಚ್ಚಾಗಿದ್ದು, ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದವು. ಈ ಭಾರೀ ಮಳೆಯಿಂದಾಗಿ ಪುತ್ತೂರಿನ ಮನೆಯೊಂದು ಭಾಹಶಃ ಹಾನಿಗೊಳಗಾಗಿದೆ. ಹೆಚ್ಚುತ್ತಿರುವ ಮಳೆಯಿಂದಾಗಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ದಿನ ಸಮುದ್ರದಲ್ಲಿ ಗಾಳಿಯ ರಭಸದಿಂದಾಗಿ ದೊಡ್ಡ ಅಲೆಗಳು ದಡದಲ್ಲಿ ಅಪ್ಪಳಿಸುತ್ತಿರುವುದು ಕಂಡುಬಂದಿದೆ. ಸಮುದ್ರದಲ್ಲಿ ಗಾಳಿಯ ವೇಗವು ಹೆಚ್ಚಾಗಿರುವ ಕಾರಣ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ.