ಮಂಗಳೂರು: ಮಹಿಳೆಯೋರ್ವರ ಹತ್ಯೆ ಪ್ರಕರಣ ➤ ಆರೋಪಿ ಖಾಕಿ ಬಲೆಗೆ

(ನ್ಯೂಸ್ ಕಡಬ) newskadaba.com ಬಂಟ್ವಾಳ , ಅ.14: ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಬೆಳ್ಳೇರಿ ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದು, ವಿಚಾರಣೆಯ ಸಂದರ್ಭ ಬಂಧಿತ ಆರೋಪಿ ಚಿನ್ನಾಭರಣ ದೋಚಲು ಬಂದು ಅತ್ಯಾಚಾರ ಗೈದು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

 

 

ಬಂಧಿತ ಆರೋಪಿಯನ್ನು ಸಕಲೇಶಪುರದ ನಿವಾಸಿ ಪಾತೂರು ಬಾಡಿಗೆ ಮನೆಯಲ್ಲಿ ವಾಸವಾಗಿರುವ ಮಹಮ್ಮದ್‌ ಅಶ್ರಫ್‌ (28) ಎಂದು ಗುರುತಿಸಲಾಗಿದೆ. ಕುಸುಮಾ ಅವರ ನಿವಾಸದ ಎದುರು ವಾಸಿಸುವ ಗಿರೀಶ್ ಅವರ ತೋಟದ ಕೆಲಸಕ್ಕೆಂದು ಅಶ್ರಫ್ ಬಂದಿದ್ದನು. ಅಶ್ರಫ್ ಈ ಹಿಂದೆ ಆಟೋ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ. ನಂತರ ಆತ ಆಟೋವನ್ನು ಮಾರಾಟ ಮಾಡಿದ್ದು, ಕೂಲಿ ಕೆಲಸ ಮಾಡುತ್ತಿದ್ದನು.

Also Read  ಕಡಬ ತಾಲೂಕಿನಲ್ಲಿ ಒಂದೇ ದಿನ 101 ಮಂದಿಗೆ ಕೊರೋನಾ ಪಾಸಿಟಿವ್ ➤ ಪುತ್ತೂರು, ಸುಳ್ಯ ತಾಲೂಕುಗಳಲ್ಲಿ 188 ಪ್ರಕರಣ ಪತ್ತೆ

 

ಅಶ್ರಫ್‌‌ ಪಾತೂರಿನಲ್ಲಿ ಬಾಡಿಗೆ ಮನೆಯಲ್ಲಿದ್ದು, ನಗದು ಹಾಗೂ ಚಿನ್ನಾಭರಣ ದೋಚುವ ಉದ್ದೇಶದಿಂದ ಬೆಳ್ಳೇರಿಯ ಕುಸುಮಾ ಅವರ ಮನೆಗೆ ಅಕ್ರಮವಾಗಿ ಪ್ರವೇಶಿಸಿದ್ದಾನೆ. ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರಕ್ಕೆಂದು ಕೈಹಾಕುವ ಸಂದರ್ಭದಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಮನೆಯಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಬೆಳಕಿಗೆ ಬಂದಿತ್ತು .   ಅಕ್ಟೋಬರ್ 14ರ ಇಂದು (ಬುಧವಾರ) ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

 

error: Content is protected !!
Scroll to Top