ಬೆಳ್ಳಂಬೆಳಗ್ಗೆ ಕಾವೂರು ಮಾರುಕಟ್ಟೆಗೆ ಮಹಾನಗರ ಮೇಯರ್ ದಾಳಿ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.14: ಇಂದು ಬೆಳ್ಳಂಬೆಳಗ್ಗೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್‌ ದಿವಾಕರ್ ಪಾಂಡೇಶ್ವರ್ ಅವರು ಕಾವೂರು ಮಾರುಕಟ್ಟೆಗೆ ದಾಳಿ ನಡೆಸಿದ್ದಾರೆ.

 

 

ಕಾವೂರಿನಲ್ಲಿ ಬೀದಿ ಬದಿಯಲ್ಲಿ ವ್ಯಾಪಾರ ನಡೆಸದಂತೆ ಹಲವು ಬಾರಿ ಮಂಗಳೂರು ಮಹಾನಗರ ಪಾಲಿಕೆಯು ಬೀದಿ ಬದಿ ವ್ಯಾಪಾರಸ್ಥರಿಗೆ ಸೂಚನೆ ನೀಡಿದ್ದು, ವ್ಯಾಪಾರಸ್ಥರು ವ್ಯಾಪಾರ ನಡೆಸುತ್ತಲ್ಲೇ ಇದ್ದರು. ಮಹಾನಗರ ಪಾಲಿಕೆಯು ಈ ಹಿಂದೆ ಕಾವೂರಿನಲ್ಲಿ ಬೀದಿ ಬದಿ ವ್ಯಾಪಾರಸ್ಥರನ್ನು ಸ್ಥಳದಿಂದ ತೆರವುಗೊಳಿಸಿದ್ದು ತಂತಿ ಬೇಲಿ ಅಳವಡಿಸಿದ್ದರು. ಆದರೆ ಪಾಲಿಕೆಯ ಸೂಚನೆಗೆ ಕ್ಯಾರೇ ಅನ್ನದ ಬೀದಿ ಬದಿ ವ್ಯಾಪಾರಸ್ಥರು ಆ ತಂತಿ ಬೇಲಿಯನ್ನು ಕಿತ್ತು ಮಾರಾಟ ಆರಂಭಿಸಿದ್ದರು. ಈ ಹಿನ್ನೆಲೆ ಇಂದು ಬೆಳ್ಳಬೆಳಗ್ಗೆ ಮನಪಾ ಮೇಯರ್ ದಿವಾಕರ್ ಪಾಂಡೇಶ್ವರ್ ಅವರು ಕಾವೂರು ಮಾರುಕಟ್ಟೆಗೆ ದಾಳಿ ನಡೆಸಿದ್ದಾರೆ.

Also Read  ನವವಿವಾಹಿತರಿಗೆ ಗುಡ್ ನ್ಯೂಸ್- ಇನ್ಮುಂದೆ ಕುಳಿತಲ್ಲೇ ಪಡೆಯಬಹುದು ‘ವಿವಾಹ ನೋಂದಣಿ’

 

error: Content is protected !!
Scroll to Top