ಸಂಪತ್‌ ಕುಮಾರ್‌ ಕೊಲೆ ಪ್ರಕರಣ ➤ ಆರೋಪಿಗಳು ಖಾಕಿ ಬಲೆಗೆ

(ನ್ಯೂಸ್ ಕಡಬ) newskadaba.com ಸುಳ್ಯ, ಅ.12: ಬಾಲಚಂದ್ರ ಕಳಗಿ ಹತ್ಯೆ ಆರೋಪಿಗಳಲ್ಲಿ ಓರ್ವನಾದ ಸಂಪತ್‌ ಕುಮಾರ್‌ ನನ್ನು ಅ.8 ರಂದು ಹತ್ಯೆ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ 5 ಆರೋಪಿಗಳ ಪೈಕಿ 4 ಜನರಿಗೆ ಪೊಲೀಸ್‌ ಕಸ್ಟಡಿ ಹಾಗೂ ಒರ್ವನಿಗೆ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿದೆ.

 

 

ಸಂಪತ್‌ ಕುಮಾರ್‌ ಹತ್ಯೆ ಪ್ರಕರಣವನ್ನು ಬೇಧಿಸಿದ ಪೊಲೀಸ್‌ ತಂಡ ಆರೋಪಿಗಳಾದ ಮನಮೋಹನ್‌ ಯಾನೆ ಮನು ಕಲ್ಲುಗುಂಡಿ, ಮನೋಜ್‌ ಯಾನೆ ಮಧು ದಂಡಕಜೆ, ಬಿಪಿನ್‌ ಕೂಲಿಶೆಡ್ಡ್‌, ಕಾರ್ತಿಕ್‌ ದಂಡಕಜೆ ಹಾಗೂ ಶಿಶಿರ್‌ ಅಡ್ಕಾರ್‌ ಎಂಬವರನ್ನು ಬಂಧಿಸಿದ್ದಾರೆ. ಇಂದು ಅವರನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಧೀಶರು ಮನು, ಮಧು, ಬಿಪಿನ್‌ ಹಾಗೂ ಕಾರ್ತಿಕ್‌ ಅವರನ್ನು ಪೊಲೀಸ್‌ ಕಸ್ಟಡಿಗೂ, ಶಿಶಿರ್‌ ನನ್ನು ನ್ಯಾಯಾಂಗ ಕಸ್ಟಡಿಗೂ ಒಪ್ಪಿಸಿ ಆದೇಶಿಸಿದ್ದಾರೆ. ಆರೋಪಿಗಳನ್ನು ಕಾರಾವಾರದಲ್ಲಿ ಪೊಲೀಸರು ಬಂಧಿಸಿ ಸುಳ್ಯಕ್ಕೆ ಕರೆತಂದಿದ್ದು, ಇಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

Also Read  ಉಡುಪಿ ಜುಲೈ 31ರ ತನಕ ಭಕ್ತರಿಗೆ ಶ್ರೀ ಕೃಷ್ಣನ ದರ್ಶನ ಭಾಗ್ಯವಿಲ್ಲ

 

error: Content is protected !!
Scroll to Top