ಕುಕ್ಕೆ ಸುಬ್ರಹ್ಮಣ್ಯ: ಆಶ್ಲೇಷ ನಕ್ಷತ್ರದಿಂದಾಗಿ ಭಕ್ತರ ನೂಕುನುಗ್ಗಲು

(ನ್ಯೂಸ್ ಕಡಬ) newskadaba.com ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಅ.12: ಕೊರೋನಾ ಹಿನ್ನಲೆಯಲ್ಲಿ ಸೇವೆಗಳಿಗೆ ಮಿತಿ ಇರುವುದರಿಂದ ಭಕ್ತರು ಸರತಿ ಸಾಲಿನಲ್ಲಿ ಹಿಂದಿನ ದಿನವೇ ನಿಲ್ಲಲಾಗಿದ್ದ ದೃಶ್ಯ ಇದೀಗ ಕಂಡುಬಂದಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕೆಲವು ದಿನಗಳಿಂದ ಹೆಚ್ಚಿನ ಭಕ್ತರು ಭೆಟಿ ನೀಡುತ್ತಿದ್ದು, ಇಂದಿನ ಸೇವೆಗಾಗಿ ನಿನ್ನೆಯೇ ಭಕ್ತರು ಕ್ಯೂ ನಿಂತಿದ್ದಾರೆ.

ಕುಕ್ಕೆಯಲ್ಲಿ ಸೇವೆಗಳಿಗೆ ರಶೀದಿಯನ್ನು ಬೆಳಿಗ್ಗೆ 7 ಗಂಟೆಗೆ ನೀಡಲು ಪ್ರಾರಂಭಿಸುತ್ತಾರೆ. ಆದರೆ, ಇತ್ತ ಭಕ್ತರು  ಇಂದು ಆಶ್ಲೇಷ ನಕ್ಷತ್ರವಿದ್ದು, ವಿಶೇಷ ದಿನವಾಗಿರುವುದರಿಂದ ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಸೇವೆ ನೆರವೇರಿಸಲು ರಶೀದಿ ವಂಚಿತವಾಗುವ ಅಥವಾ ತಡವಾಗುವ ಆತಂಕದಿಂದ ಭಾನುವಾರ ರಾತ್ರಿಯೇ ದೇವಲದ ಕಚೇರಿ ಬಳಿ ಸರತಿ‌ ಸಾಲಿನಲ್ಲಿ ನಿಂತಿದ್ದಾರೆ. ಆಶ್ಲೇಷ ಬಲಿ ಪೂಜೆಗೆ ಈ ಬಾರಿ ಕೊರೋನಾ ಆತಂಕ ಕೂಡ ಮೂಡಿದೆ. ಕೋವಿಡ್ ಹಿನ್ನಲೆಯಲ್ಲಿ ಸೇವೆಗಳಿಗೆ ಮಿತಿ ಇರುವುದರಿಂದ ಭಕ್ತರು ಸೇವೆಗಾಗಿ ರಾತ್ರಿಯೇ ಸರತಿ‌ ಸಾಲಿನಲ್ಲಿ ನಿಂತಿದ್ದಾರೆ. ಆಶ್ಲೇಷ ನಕ್ಷತ್ರ ದಿನದಂದು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ಆಶ್ಲೇಷ ಬಲಿ ಸೇವೆ ಮಾಡಿಸಿಕೊಳ್ಳುತ್ತಾರೆ.

Also Read  ಉಡುಪಿ: ಮಾದಕ ವಸ್ತು ಗಾಂಜಾದೊಂದಿಗೆ ದರೋಡೆಗೆ ಸಂಚು..! ➤ ನಾಲ್ವರ ಬಂಧನ……

error: Content is protected !!
Scroll to Top