ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ➤ 5 ಮಂದಿ ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ನೆಟ್ಟಿಗೆಮುಡ್ನೂರು, ಅ.12: ನೆಟ್ಟಿಗೆಮುಡ್ನೂರು ಗ್ರಾಮದ ಮೈರೋಳು ಎಂಬಲ್ಲಿ ಸರಕಾರಿ ಗುಡ್ಡ ಪ್ರದೇಶದಲ್ಲಿ ಕೋಳಿ ಅಂಕ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಸಂಪ್ಯ ಎಸ್. ಐ ಉದಯರವಿ ಅವರ ನೇತೃತ್ವದಲ್ಲಿ ದಾಳಿ ನಡೆಸಿದ ಘಟನೆ ಇಂದು ನಡೆದಿದೆ.

 

 

ಮೈರೋಳು ಸರಕಾರಿ ಗುಡ್ಡದ ಖಾಲಿ ಪ್ರದೇಶದಲ್ಲಿ ಕೋಳಿ ಅಂಕ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿದ ಹಿನ್ನಲೆಯಲ್ಲಿ ದಾಳಿ ನಡೆಸಿದ್ದು, ಕೋಳಿ ಅಂಕದಲ್ಲಿ ನಿರತರಾಗಿದ್ದವರ  5 ಮಂದಿಯನ್ನು ಬಂಧಿಸಿದ್ದು, ಜೂಜಾಟಕ್ಕೆ ಬಳಸಿದ್ದ ನಗದು, 7 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ 4 ಮಂದಿ ಮತ್ತು ಇತರರು ಪರಾರಿಯಾಗಿದ್ದಾರೆ. ಆರೋಪಿಗಳು ಜೂಜಿಗೆ ಬಳಸಿದ್ದ ರೂ. 9 ಸಾವಿರ ಮೌಲ್ಯದ ವಿವಿಧ ಜಾತಿಯ 9 ಹುಂಜ ಕೋಳಿಗಳನ್ನು ಮತ್ತು ಜೂಜಾಟಕ್ಕೆ ಬಳಸಿದ್ದ ರೂ 9 ಸಾವಿರ ನಗದನ್ನು ಹಾಗೂ ಆರೋಪಿಗಳು ಜೂಜಾಟದ ಸ್ಥಳಕ್ಕೆ ಬರಳು ಉಪಯೋಗಿಸಿ 7 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದು, ಸಂಪ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಸರ ಕಳ್ಳತನ- ಪ್ರಕರಣ ದಾಖಲು..!

 

error: Content is protected !!
Scroll to Top