ಸುಬ್ರಹ್ಮಣ್ಯ: ಅಪರಿಚಿತ ಮಹಿಳೆಯ ಶವ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಅ.11: ಸುಬ್ರಹ್ಮಣ್ಯದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಅಪರಿಚಿತ ಮಹಿಳೆಯೊಬ್ಬರು ಅಸೌಖ್ಯದಿಂದ ಕಳೆದ ದಿನದಿಂದಲೇ ಇರುವುದು ಕಂಡುಬಂದಿದ್ದು, ಇಂದು ಮಹಿಳೆಯ ಶವ ಪತ್ತೆಯಾಗಿದೆ.

 

 

ಇವರಿಗೆ ಅಂದಾಜು 50 ವರ್ಷ ಪ್ರಾಯ ಎಂದು ಹೇಳಲಾಗುತ್ತಿದೆ. ಇಂದು ಕೆಎಸ್‌ ಆರ್‌ ಟಿ ಸಿ ಯ ಕೆಲವರು ಆರೋಗ್ಯ ಇಲಾಖೆಗೆ ಮಾಹಿತಿಯನ್ನು ನೀಡಿದ್ದು, ಅರೋಗ್ಯ ಇಲಾಖೆಯ 108 ಆಂಬ್ಯುಲೆನ್ಸ್‌ ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮಹಿಳೆಯು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸ್‌ ಇಲಾಖೆಯವರು ಧಾವಿಸಿದ್ದು, ಮಹಿಳೆಯ ಮಾಹಿತಿ ಕುರಿತು ಕಲೆಹಾಕುತ್ತಿದ್ದಾರೆ.

 

error: Content is protected !!

Join the Group

Join WhatsApp Group