ಸ್ಥಗಿತಗೊಂಡಿದ್ದ ಮುಂಬೈ-ಮಂಗಳೂರು ಏರ್ ಇಂಡಿಯಾ ವಿಮಾನ ಕಾರ್ಯಾಚರಣೆ ಪುನರಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.10: ಕೊರೊನಾ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಮುಂಬೈ-ಮಂಗಳೂರು ಅಂತರಾಜ್ಯ ಮತ್ತು ವಿದೇಶಿಯ ಏರ್ ಇಂಡಿಯಾ ವಿಮಾನಗಳ ಸಂಚಾರವು  ಅಕ್ಟೋಬರ್ 12 ಕ್ಕೆ ಮತ್ತೆ ಆರಂಭಗೊಳ್ಳಲಿದೆ.

 

 

ಮಂಗಳೂರಿನಿಂದ ನಿರ್ಗಮನ ವಿಮಾನ ಎಐ 680 ಮಧ್ಯಾಹ್ನ 12.40 ಕ್ಕೆ ಹೊರಟು ಮುಂಬೈಗೆ ಮಧ್ಯಾಹ್ನ 2.20 ಕ್ಕೆ ತಲುಪಲಿದೆ. ವಿಮಾನ ಎಐ 679 ಮುಂಬೈಯಿಂದ ಬೆಳಿಗ್ಗೆ 10.15 ಕ್ಕೆ ಹೊರಟು ಮಧ್ಯಾಹ್ನ 12.00 ಕ್ಕೆ ಮಂಗಳೂರಿಗೆ ತಲುಪಲಿದೆ. ಏರ್ ಇಂಡಿಯಾ ಮೂಲಗಳ ಪ್ರಕಾರ, ವಿಮಾನಯಾನವು ವಾರದಲ್ಲಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ಕಾರ್ಯನಿರ್ವಹಿಸಲಿವೆ.

Also Read  ಪ್ರತಿಯೊಬ್ಬರಲ್ಲಿ ಪರಿಸರ ಪ್ರಜ್ಞೆ ಅಗತ್ಯ - ಡಾ|| ಚೂಂತಾರು

 

 

error: Content is protected !!
Scroll to Top