ಓಡಬಾಯಿ: ಅಂಬ್ಯುಲೆನ್ಸ್ ಮತ್ತು ಓಮ್ನಿ ಕಾರು ಮುಖಾಮುಖಿ ಢಿಕ್ಕಿ

(ನ್ಯೂಸ್ ಕಡಬ) newskadaba.com ಓಡಬಾಯಿ, ಅ.10: ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಓಮ್ನಿ ಕಾರು ಮತ್ತು ಮಂಗಳೂರಿನಿಂದ ಮಡಿಕೇರಿ ಕಡೆಗೆ ಕೊರೋನಾದಿಂದ ಮೃತಪಟ್ಟ ರೋಗಿಯೊಬ್ಬರನ್ನು ಸಾಗಿಸುತ್ತಿರುವ ಅಂಬ್ಯುಲೆನ್ಸ್‌ ಪರಸ್ಪರ ಢಿಕ್ಕಿ ಹೊಡೆದ ಘಟನೆ ಇಂದು ಸುಳ್ಯ ಓಡಬಾಯಿ ಬಳಿ ನಡೆದಿದೆ.

 

 

ಓಡಬಾಯಿ ಗ್ರೀನ್ ಪಾಮ್‌ ನರ್ಸರಿ ಬಳಿ ಹಾಕಿದ್ದ ಬ್ಯಾರಿಕೇಡ್‌ ತಪ್ಪಿಸುವ ಯತ್ನದಲ್ಲಿ ಅಂಬ್ಯುಲೆನ್ಸ್‌ ಎದುರಿನಿಂದ ಬರುತ್ತಿದ್ದ ಓಮ್ನಿಗೆ ಢಿಕ್ಕಿ ಹೊಡೆದಿದ್ದು, ಓಮ್ನಿ ಜಖಂಗೊಂಡಿದೆ. ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

Also Read  ಆ.1ರಂದು 'ಆಯುಷ್ಮಾನ್ ಭವ 3.0' ಕಾರ್ಯಕ್ರಮಕ್ಕೆ ಚಾಲನೆ - 'ಮನೆ ಬಾಗಿಲಿಗೆ' ಆರೋಗ್ಯ ಸೇವೆ

 

error: Content is protected !!
Scroll to Top