ಉಪ್ಪಿನಂಗಡಿ : ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಮಾಜಿ ಗ್ರಾ.ಪಂ.ಸದಸ್ಯ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ.10: ಅಸ್ವಸ್ಥನಾಗಿ ಪ್ರಯಾಣಿಕರ ತಂಗುದಾಣದಲ್ಲಿ ನರಳಾಡುತ್ತಿದ್ದ ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ  ಮಾಜಿ ಗ್ರಾ.ಪಂ.ಸದಸ್ಯ  ಪ್ರಶಾಂತ್ ಮಾನವೀಯತೆ ಮೆರೆದಿದ್ದಾರೆ.

 

ಕೊರೋನಾ ಭೀತಿಯಿಂದಾಗಿ ಯುವಕನೋರ್ವ ಅಸ್ವಸ್ಥತೆಯಿಂದ ನರಳಾಟ ಮಾಡುತ್ತಿದ್ದ ದೃಶ್ಯ ಕಂಡು ಬಂದಿದ್ದು, ಮಾಹಿತಿ ಪಡೆದ ಸ್ಥಳೀಯ ಗ್ರಾಮ ಪಂಚಾಯತ್‌ ಮಾಜಿ ಸದಸ್ಯ ಪ್ರಶಾಂತ್‌ ಶಿವಾಜಿನಗರ ರವರು 108 ಆರೋಗ್ಯ ಕವಚವನ್ನು ಸಂಪರ್ಕಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಕೊರೋನಾ ಭೀತಿಯ ಹಿನ್ನಲೆಯಲ್ಲಿ ವೈರಸ್‌ ನಿರೋಧಕ ಕಿಟ್‌ ಕಲ್ಪಿಸಿ ಆತನನ್ನು ಪುತ್ತೂರಿನ ಸರಕಾರಿ ಆಸ್ಪತ್ತೆಗೆ ದಾಖಲಿಸುವಲ್ಲಿ ಸಹಕಾರಿಯಾದರು. ಗಂಭಿರ ಆರೋಗ್ಯ ಸ್ಥಿತಿಯಲ್ಲಿದ್ದ ಅಂದಾಜು 40 ವಯೋಮಾನದೊಳಗಿನ ಈ ವ್ಯಕ್ತಿ ಚಿಕಿತ್ಸೆ ನಡೆಯುತ್ತಿದ್ದು, ಚಿಕಿತ್ಸೆಗೆ ದೇಹ ಸ್ಪಂದಿಸುತ್ತಿದೆ ಎಂದು ತಿಳಿದುಬಂದಿದೆ , ಇನ್ನು ಪ್ರಶಾಂತ್‌ ಶಿವಾಜಿನಗರ ರವರ ಮಾನವೀಯತೆಗೆ ಪ್ರಶಂಸೆ ವ್ಯಕ್ತವಾಗಿದೆ.

Also Read  ಸುಳ್ಯ: ಟಿಪ್ಪರ್ ಹಾಗೂ ಬೈಕ್ ನಡುವೆ ಅಪಘಾತ ➤ ಬೈಕ್ ಸವಾರನಿಗೆ ಗಾಯ..!

error: Content is protected !!
Scroll to Top