ಅರಂತೋಡು: ಕೊಲೆಗೈದ ಶಂಕಿತ ಆರೋಪಿಗಳು ಬಳಸಿದ್ದ ಕ್ವಾಲಿಸ್‌ ವಾಹನ ಪತ್ತೆ

(ನ್ಯೂಸ್ ಕಡಬ) newskadaba.com ಸುಳ್ಯ, ಅ.10: ಕಳಗಿ ಬಾಲಚಂದ್ರರ ಹತ್ಯೆ ಆರೋಪಿಗಳಲ್ಲಿ ಒಬ್ಬನಾದ ಕಲ್ಲುಗುಂಡಿಯ ಸಂಪತ್ನನ್ನು ಅ.8 ರಂದು ಕೊಲೆಗೈದ ಶಂಕಿತ ಆರೋಪಿಗಳು ಬಳಸಿದ್ದ ಕ್ವಾಲಿಸ್‌ ವಾಹನವೊಂದು ಅರಂತೋಡು ಬಳಿಯ ಕಳುಬೈಲು ಎಂಬಲ್ಲಿರುವ ರಬ್ಬರ್‌ ತೋಟವೊಂದರಲ್ಲಿ ಪತ್ತೆಯಾಗಿದೆ.

 

 

ಇದು ಚೊಕ್ಕಾಡಿಯ ಪದ್ಮನಾಭ ಎಂಬವರ ವಾಹನವಾಗಿದ್ದು, ಸಂಪತ್‌ ಹತ್ಯೆ ಮಾಡಿದವರು ಈಯೊಂದು ಹಸಿರು ಬಣ್ಣದ ಕ್ವಾಲಿಸ್‌ ವಾಹನದಲ್ಲಿ ಬಂದಿದ್ದರು ಎಂಬುದಾಗಿ ಮಾಹಿತಿ ಲಭ್ಯವಾಗಿದೆ. ಕಲ್ಲುಗುಂಡಿಯ ಮನು ಎಂಬಾತ ಈ ಕ್ವಾಲಿಸ್ ನ್ನು ಶೂಟಿಂಗ್‌ ಇದೆ ಎಂದು ಹೇಳಿ ಸೆ.30 ರಂದು ಕೊಂಡೊಯ್ದಿರುವುದಾಗಿ ಪದ್ಮನಾಭ ಎಂಬವರು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಪೊಲೀಸರು ಮನು ಎಲ್ಲಿದ್ದಾನೆ ಎಂದು ಹುಡುಕಾಡಿದ್ದು, ಮನುವಿನೊಂದಿಗೆ ಕೆಲವು ಯುವಕರು ಕೂಡ ಕಾಣೆಯಾಗಿದ್ದು, ಅದೇ ತಂಡ ಸಂಪತ್‌ ಕೊಲೆಯ ದೃಷ್ಕೃತ್ಯ ನಡೆಸಿದವರೆಂದು ಪೊಲೀಸರಿಗೆ ಖಚಿತವಾಗಿದೆ. ಇದೀಗ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆರೋಪಿಗಳನ್ನು ಹಾಸನದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಬಾಲಚಂದ್ರ ಕಳಗಿ ರವರ ಕೊಲೆಗೆ ಪ್ರತಿಕಾರವಾಗಿ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರಬೀಳಲಿದೆ.

Also Read  ➤ಮಂಗಳೂರು : ತೋಟದ ಕೆಲಸಗಾರನ ಭೀಕರ ಹತ್ಯೆ!

error: Content is protected !!
Scroll to Top