ಕೇರಳ: ದೇವಾಲಯದ 10 ಅರ್ಚಕರಿಗೆ ಕೋವಿಡ್ ದೃಢ

(ನ್ಯೂಸ್ ಕಡಬ) newskadaba.com ತಿರುವನಂತಪುರ, ಅ.09: ಕೇರಳದ ಪದ್ಮನಾಭ ಸ್ವಾಮಿ ದೇವಾಲಯದ ಮುಖ್ಯ ಅರ್ಚಕರು, ಸಹಾಯಕ ಅರ್ಚಕರು ಮತ್ತು ಕಾವಲುಗಾರರು, ಒಟ್ಟಾಗಿ 10 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಅ. 15ರ ತನಕ ಭಕ್ತರಿಗೆ ದೇವಾಲಯದ ಪ್ರವೇಶಕ್ಕೆ ಅನುಮತಿ ಇಲ್ಲ ಎಂದು ತಿಳಿಸಿದ್ದಾರೆ.

 

 

ದೇವಾಲಯದ ಇಬ್ಬರು ಮುಖ್ಯ ಅರ್ಚಕರು ಸೇರಿದಂತೆ 8 ಸಹಾಯಕ ಅರ್ಚಕರಿಗೆ ಹಾಗೂ ಇಬ್ಬರು ಕಾವಲುಗಾರರಿಗೆ ಕೊರೊನಾ ತಗುಲಿದ್ದು, ಈ ಬಗ್ಗೆ ಪದ್ಮನಾಭ ಸ್ವಾಮಿ ದೇವಾಲಯದ ಕಾರ್ಯಕಾರಿ ಅಧಿಕಾರಿ ರಥೀಶನ್ ಐಎಎಸ್ ಮಾಹಿತಿ ನೀಡಿದ್ದು, ತಂತ್ರಿಗಳು ಪ್ರತಿನಿತ್ಯದ ಪೂಜೆಯನ್ನು ನೆರವೇರಿಸಲಿದ್ದಾರೆ ಎಂದಿದ್ದಾರೆ.

Also Read  SSLC ಪಾಸ್ ಆದವರಿಗೆ ಗುಡ್ ನ್ಯೂಸ್; ಈ ಯೋಜನೆಯಡಿ ತಿಂಗಳಿಗೆ 8 ಸಾವಿರ ರೂಪಾಯಿ ಪಡೆಯಬಹುದು - ಇಂದೇ ಅರ್ಜಿ ಸಲ್ಲಿಸಿ

 

error: Content is protected !!
Scroll to Top