ಬಡ್ಡಡ್ಕ: ರಸ್ತೆ ಬಿಟ್ಟು ಚರಂಡಿಗೆ ಇಳಿದ ಮಿನಿ ಟಾಟಾ ಏಸ್‌ ರಿಕ್ಷಾ



(ನ್ಯೂಸ್ ಕಡಬ) newskadaba.com ಬಡ್ಡಡ್ಕ, ಅ.09: ಬಡ್ಡಡ್ಕ ಶಾಲೆಯ ತಿರುವಿನಲ್ಲಿ ಪಾಣತ್ತೂರು ಕಡೆಯಿಂದ ಸುಳ್ಯ ಕಡೆಗೆ ಸಂಚರಿಸುತ್ತಿದ್ದ ಮಿನಿ ಟಾಟಾ ಏಸ್‌ ಗೂಡ್ಸ್‌ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಚರಂಡಿಗೆ ಇಳಿದ ಘಟನೆ ಇಂದು ನಡೆದಿದೆ.





 

ವಾಹನದಲ್ಲಿ ಚಾಲಕ ಸೇರಿದಂತೆ ಇಬ್ಬರು ಮಹಿಳೆ ಮತ್ತು ಮಗು ಸಂಚರಿಸುತ್ತಿದ್ದು, ಅಲ್ಪ ಸ್ವಲ್ಪ ಗಾಯಗೊಂಡಿರುತ್ತದೆ. ಹಿಂದಿನಿಂದ ಕಾರಿನಲ್ಲಿ ಬರುತ್ತಿದ್ದವರು ಗಾಯಗೊಂಡವರನ್ನು ಸುಳ್ಯ ಅಸ್ಪತ್ರೆಗೆ ದಾಖಲಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.






 

error: Content is protected !!
Scroll to Top