ಕಡಬ: ನಾಪತ್ತೆಯಾಗಿದ್ದ ಅವಿವಾಹಿತನ ಮೃತ ದೇಹ ಹೊಸ್ಮಠ ಹೊಳೆಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಅ.08: ಕಳೆದ ಎರಡು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಯುವಕ ಹೊಸಮಠ ಹೊಳೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಇಂದು ನಡೆದಿದೆ. ಮೃತರನ್ನು ಕುಟ್ರುಪಾಡಿ ಗ್ರಾಮದ ಹೊಸಮಠ ಚೆವುಡೇಲು ನಿವಾಸಿ ಪೊಡಿಯ ಎಂಬವರ ಅವಿವಾಹಿತ ಪುತ್ರ ದಿನೇಶ್‌ (29 ವ.) ಎಂದು ಗುರುತಿಸಲಾಗಿದೆ.

 

 

ದಿನೇಶ್‌ ರವರ ಮೃತದೇಹವನ್ನು ವಿವಿಧ ಕಡೆಗಳಲ್ಲಿ ಹಡುಕಾಡಿದರೂ ಅವರ ಸುಳಿವು ಪತ್ತೆಯಾಗಿರಲಿಲ್ಲ. ಇದೀಗ ಹೊಸಮಠ ಹೊಳೆಯ ರಾಮಕಲ್ಲು ಎಂಬಲ್ಲಿ ಮೃತ ದೇಹವು ಕಂಡುಬಂದಿದೆ. ದಿನೇಶ್‌ ರವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಮೃತದೇಹವನ್ನು ಕಡಬ ಪೊಲೀಸರ ಸಮ್ಮುಖದಲ್ಲಿ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ತರಲಾಗಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.

Also Read  ಮಂಗಳೂರು: ಮಾದಕ ವಸ್ತು ಗಾಂಜಾ ಸಾಗಾಟ.!!  ➤  ಆರೋಪಿ ಅರೆಸ್ಟ್         

 

error: Content is protected !!
Scroll to Top