ಎಟಿಎಂನಿಂದ ಹಣ ಕಳ್ಳತನಕ್ಕೆ ವಿಫಲ ಯತ್ನ ► ಹೂವಿನ ವ್ಯಾಪಾರಿಯನ್ನು ಬಂಧಿಸಿದ ಪೊಲೀಸರು

(ನ್ಯೂಸ್ ಕಡಬ) newskadaba.com ಚಿತ್ರದುರ್ಗ,ಸೆ.23. ಎಟಿಎಂ ಮಷೀನ್ ಒಡೆದು ಹಣ ಕಳ್ಳತನ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮದಲ್ಲಿ ನಡೆದಿದೆ.

ಚಿಕ್ಕಜಾಜೂರು ಗ್ರಾಮದ ಕೆನೆರಾ ಬ್ಯಾಂಕ್ ಪಕ್ಕದಲ್ಲೇ ಇದ್ದ ಕೆನೆರಾ ಎಟಿಎಂನಿಂದ ಹಣ ಕಳ್ಳತನಕ್ಕೆ ವಿಫಲ ಯತ್ನ ನಡೆಸಲಾಗಿದೆ. ಅದೇ ಗ್ರಾಮದ ಹೂವಿನ ವ್ಯಾಪಾರಿ ನಂದೀಶ(26) ಎಂಬ ವ್ಯಕ್ತಿ ಕುಡಿದ ಆಮಲಿನಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾನೆ. ಆರೋಪಿಯು ಎಟಿಎಂ ಮಷೀನನ್ನು ಜಖಂಗೊಳಿಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

Also Read  ಹೈಕೋರ್ಟ್ ವಕೀಲ ಅಬ್ದುಲ್ ಫಾರೂಕ್ ಹೃದಯಾಘಾತದಿಂದ ಮೃತ್ಯು                    

ಘಟನೆಯ ವೇಳೆ ಸಾರ್ವಜನಿಕರು ನೀಡಿದ ಮಾಹಿತಿಯ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಘಟನೆಯ ಕುರಿತು ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top