ಮಂಗಳೂರು: ಸಿಂಡಿಕೇಟ್‌ ಬ್ಯಾಂಕ್‌ ನ ನಿವೃತ್ತ ಅಧಿಕಾರಿ ಅತ್ತಾವರ ಶಿವಾನಂದ ಕರ್ಕೇರ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.08: ಪ್ರಸಿದ್ದ ತಳು ಸಂಘಟಕ, ಕನ್ನಡ, ತುಳು ಅಕಾಡೆಮಿಯ ಮಾಜಿ ಸದಸ್ಯ, ತುಳು ಸಾಹಿತಿಗಳಾದ ಅತ್ತಾವರ ಶಿವಾನಂದ ಕರ್ಕೇರ ಅವರು ಕಳೆದ ದಿನ ಸಂಜೆ ನಿಧನರಾದರು.

 

ಇವರು ಉತ್ತಮ ನಾಟಕ ರಚನೆಗಾರರಾಗಿದ್ದು, “ಎರು”, “ಮೈಂದೆ” ನಾಟಕವನ್ನು ಕೂಡ ರಚಿಸಿದ್ದಾರೆ. ತುಳು ಎಂ.ಎ ಪ್ರಥಮ ಬ್ಯಾಚ್‌ ವಿದ್ಯಾರ್ಥಿಯಾಗಿದ್ದು, ಸಿಂಡಿಕೇಟ್‌ ಬ್ಯಾಂಕ್‌ ನ ನಿವೃತ್ತ ಅಧಿಕಾರಿಯಾಗಿದ್ದರು. ಇವರಿಗೆ ಕಡಲ್‌ ಕವಿತಾ ಸಂಕಲನ ಹಾಗೂ ಎರು ಮೈಂದೆ ನಾಟಕಗಳಿಗೆ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಮೃತರು ತುಳು ಕಾರ್ಯಕ್ರಮಗಳಲ್ಲಿ ಉತ್ತಮ ಅನುಭವಿ ಸಂಘಟಕರಾಗಿದ್ದು, ಅವರು ಸರಳ ಸಜ್ಜನಿಕೆಯ ಸ್ನೇಹ ಜೀವಿಯಾಗಿದ್ದರು.

Also Read  ಫೆ.03: ಅಬ್ಬಕ್ಕ ಉತ್ಸವದ ಅಂಗವಾಗಿ ಕ್ರೀಡೋತ್ಸವ ► ರಾಜ್ಯಮಟ್ಟದ ಮಹಿಳೆಯರ ಕುಸ್ತಿ ಪಂದ್ಯಾಟ

 

error: Content is protected !!
Scroll to Top