ಬಂಟ್ವಾಳ: ಮನೆಯವರು ಮಲಗಿದ್ದ ವೇಳೆ ಕಳ್ಳರ ಕೈಚಳಕ ➤ 12 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ.07: ಮನೆಯಲ್ಲಿ ಮನೆ ಮಂದಿ ಮಲಗಿದ್ದ ವೇಳೆ  ಬಾಗಿಲಿನ ಚಿಲಕ ಮುರಿದು ಕಳ್ಳರು ಒಳನುಗ್ಗಿದ ಘಟನೆ ಕಲ್ಲಡ್ಕ ಕರಿಂಗಾನ ಸಮೀಪದ ಅಮ್ಟೂರು ಮಸೀದಿ ಬಳಿ ಕಳೆದ ದಿನ ತಡರಾತ್ರಿ ಬೆಳಕಿಗೆ ಬಂದಿದೆ. ಕಳ್ಳರು ಕೋಣೆಯಲ್ಲಿದ್ದ ಕಪಾಟಿನ ಕೀ ತೆರೆದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ.

 

 

ಅಮ್ಟೂರು ನಿವಾಸಿ ಸುಲೈಮಾನ್ ಅವರ ಮನೆಯಲ್ಲಿ ಸುಮಾರು 12 ಲಕ್ಷ ಮೌಲ್ಯದ 28 ಪವನ್ ಚಿನ್ನಾಭರಣಗಳು ಕಳವು ಮಾಡಿದ್ದು, ಸುಲೈಮಾನ್ ಅವರ ಮಗಳು ಮಿಶ್ರಿಯಾ ಅವರಿಗೆ ಸೇರಿದ ಚಿನ್ನಾಭರಣಗಳನ್ನು ಕಳವು ನಡೆಸಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೋಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪಿಎಸ್‌ಐ ಅವಿನಾಶ್, ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Also Read  ಉಡುಪಿ: ತಂದೆಯನ್ನು ಕೊಂದ ಮಗನಿಗೆ ಮೂರು ವರ್ಷಗಳ ಬಳಿಕ ಜೀವಾವಧಿ ಶಿಕ್ಷೆ !

 

error: Content is protected !!
Scroll to Top