ಕೊೖಲ ಗ್ರಾ.ಪಂಚಾಯತ್ ► ಜಮಾಬಂದಿ ಸಭೆ

(ನ್ಯೂಸ್ ಕಡಬ) newskadaba.com ಕಡಬ,ಸೆ.23. ಕೊೖಲ ಗ್ರಾಮ ಪಂಚಾಯಿತಿಯ ಜಮಾಬಂದಿ ಕಾರ್ಯಕ್ರಮ ಗ್ರಾ.ಪಂ.ಅಧ್ಯಕ್ಷೆ ಮೀನಾಕ್ಷಿ ಬುಡಲೂರು ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.

ದ.ಕ.ಜಿ.ಪಂ.ಉಪಕಾರ್ಯದರ್ಶಿ ಉಮೇಶ್ ಎನ್.ಆರ್.ಜಮಾಬಂದಿ ಅಧಿಕಾರಿಯಾಗಿದ್ದರು. ಸಭೆಯಲ್ಲಿ 2016-17ನೇ ಸಾಲಿನ ಲೆಕ್ಕಪತ್ರಗಳ ದಾಖಲಾತಿ ಪರಿಶೀಲನೆ ಮತ್ತು ನಿರ್ವಹಿಸಿದ ಕಾಮಗಾರಿಗಳ ತಪಾಸಣೆ ನಡೆಸಲಾಯಿತು.

ಉಪಾಧ್ಯಕ್ಷೆ ವಿಜಯಶೇಖರ ಅಂಬಾ, ಸದಸ್ಯರುಗಳಾದ ಲಲಿತಾ, ಸುಜಾತ ಶೆಟ್ಟಿ, ಕೆ.ಎ.ಸುಲೈಮಾನ್, ಬೀಪಾತುಮ್ಮ, ಸುಧೀಶ್ ಶೆಟ್ಟಿ, ಹೇಮಾ, ವಿನೋಧರ ಮಾಳ, ತಿಮ್ಮಪ್ಪ ಗೌಡ, ಹರಿಣಿ ಉಪಸ್ಥಿತರಿದ್ದರು. ಪಿಡಿಒ ನಮಿತಾ ಸ್ವಾಗತಿಸಿ, ಲೆಕ್ಕಪತ್ರ ಮಂಡಿಸಿದರು. ಸಿಬ್ಬಂದಿಗಳಾದ ರಾಜೇಂದ್ರ, ರುಕ್ಮಯ, ವರದರಾಜ, ಮೀನಾಕ್ಷಿ ಸಹಕರಿಸಿದರು.

Also Read  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ- ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಆಹ್ವಾನ

ಈ ಸಂದರ್ಭದಲ್ಲಿ ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದ ಕೊೖಲ ಗ್ರಾ.ಪಂ.ಸದಸ್ಯರಾದ ನಾಗೇಶ್ ವಳಕಡಮರವರ ಆತ್ಮಕ್ಕೆ ಚಿರಶಾಂತಿ ಕೋರಿ ಸಭೆಯಲ್ಲಿ ಮೌನ ಪ್ರಾರ್ಥನೆ
ಸಲ್ಲಿಸಲಾಯಿತು.

error: Content is protected !!
Scroll to Top