ಪುತ್ತೂರು: ತಾ. ರಬ್ಬರ್‌ ಬೆಳೆಗಾರರ ಮಾರಾಟ ಸಂಸ್ಕರಣ ಸಹಕಾರ ಸಂಘದ ಚುನಾವಣೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಅ.07: ನೆಲ್ಯಾಡಿಯಲ್ಲಿ ಮುಖ್ಯ ಕಛೇರಿ ಹೊಂದಿರುವ ಪುತ್ತೂರು ತಾಲೂಕು ರಬ್ಬರ್‌ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಚುನಾವಣೆಯಲ್ಲಿ ಆಡಳಿತ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಪ್ರಸಾದ್‌ ಕೌಶಲ್‌ ಶೆಟ್ಟಿ ಬಿ, ಉಪಾಧ್ಯಕ್ಷರಾಗಿ ರೋಹಿ ಅಬ್ರಹಾಂ ಪದವು ಕುಂತೂರು ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 

 

ಇಂದು ಮುಖ್ಯ ಕಛೇರಿಯಲ್ಲಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗಿದ್ದು, ಸಹಕಾರ ಸಂಘಗಳ ಉಪನಿಬಂಧಕರ ಕಛೇರಿ ಮಂಗಳೂರು ಇಲ್ಲಿನ ಪ್ರಥಮ ದರ್ಜೆ ಸಹಾಯಕ ವಿಲಾಸ್ ರವರು ಚುನಾವಣಾಧಿಕಾರಿಯಾಗಿದ್ದರು. ಕಾರ್ಯಕ್ರಮದ ನಿರ್ದೇಶರುಗಳಾದ ಜಾರ್ಜುಕುಟ್ಟಿ ಸಿ ನಿಡ್ಯಡ್ಕ ಇಚ್ಲಂಪಾಡಿ, ಜಯರಾಮ, ಅರುಣಾಕ್ಷಿ ಅಕ್ಷಯ ನಿಲಯ ಪುಚ್ಚೇರಿ ನೆಲ್ಯಾಡಿ, ವ್ಯಾಸ ಎನ್‌.ವಿ. ನೆಕ್ಕರ್ಲ ಕೌಕ್ರಾಡಿ, ಬೈರ ಮುಗೇರ ಕುದುರಡ್ಕ ಕೋಡಿಂಬಾಳ, ಹಾಗೂ ಮತ್ತೀತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Also Read  ಮಂಗಳೂರು ವಿ. ವಿ : ಅಂತಿಮ ಸೆಮಿಸ್ಟರ್ ಪರೀಕ್ಷೆಗಳು ಆರಂಭ

 

error: Content is protected !!
Scroll to Top