ವಿದೇಶದಲ್ಲಿ ಸಲಿಂಗ ಮದುವೆಯಾದ ಕನ್ನಡಿಗ..!

(ನ್ಯೂಸ್ ಕಡಬ) newskadaba.com ಕೊಡಗು, ಅ.07:  ವಿದೇಶದಲ್ಲಿ, ಕೊಡಗಿನ ಶರತ್ ಪೊನ್ನಪ್ಪ ಮತ್ತು ಉತ್ತರ ಭಾರತ ಮೂಲದ ಸಂದೀಪ್ ದೋಸಾಂಜ್​ ಎಂಬುವವರು ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಸೆ.26ರಂದು ಸಲಿಂಗ ಮದುವೆಯಾಗಿದ್ದಾರೆ. ಈ ಪೈಕಿ ಓರ್ವ ಕನ್ನಡಿಗ!.

 

 

ಕಳೆದ ಹತ್ತು ವರ್ಷದಿಂದ ವಿದೇಶದಲ್ಲೇ ನೆಲೆಸಿರುವ ಶರತ್ ಪೊನ್ನಪ್ಪ, ಗೆಳೆಯನನ್ನೇ ವರಿಸಿದ್ದಾನೆ. ಈತನ ವಿವಾಹ ಸಮಾರಂಭದಲ್ಲಿ ಹಲವರು ಭಾಗಿಯಾಗಿ ಶುಭ ಕೋರಿದ್ದಾರೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಈ ಮದುವೆ ಫೋಟೋ ಕಂಡ ಬಹುತೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಲಿಂಗ ಮದುಮಕ್ಕಳು ಕೊಡವರ ಸಾಂಪ್ರದಾಯಿಕ ಉಡುಗೆ ಧರಿಸಿ ಅಲ್ಲದೆ, ಕೊಡಗಿನ ವಾಲಗ ಬಳಕೆ ಮಾಡಿ ಮದುವೆಯಾಗಿದ್ದಾರೆ.  ಇದನ್ನು ಕಂಡ ಕೊಡವ ಜನಾಂಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Also Read  ನೆಟ್ಟಣ: ರೈಲು ಹಳಿ ದಾಟುತ್ತಿದ್ದ ವೇಳೆ ಎಂಜಿನ್ ಢಿಕ್ಕಿ ➤‌ ವ್ಯಕ್ತಿ ಗಂಭೀರ

 

 

error: Content is protected !!
Scroll to Top