ವಿದ್ಯುತ್‌ ಕಂಬಕ್ಕೆ ಕಾರು ಢಿಕ್ಕಿ ➤ ಬೈಕ್‌ ಸವಾರನ ಮೇಲೆ ವಿದ್ಯುತ್ ತಂತಿ.!?



(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ.07: ಬೆಳ್ಳಿಪಾಡಿ ಕ್ರಾಸ್‌ ಬಳಿ ವಿದ್ಯುತ್‌ ಕಂಬಕ್ಕೆ ಕಾರು ಢಿಕ್ಕಿಯಾದ ಪರಿಣಾಮ ಕಂಬ ಮುರಿದು ಬಿದ್ದ ಘಟನೆ ಉಪ್ಪಿನಂಗಡಿ ರಸ್ತೆಯ ಕೋಡಿಂಬಾಡಿ ಸಮೀಪದಲ್ಲಿ ಇಂದು ನಡೆದಿದೆ.





 

 

ಕಾರನ್ನು ಮಹಿಳೆಯೊಬ್ಬರು ಚಲಾಯಿಸುತ್ತಿದ್ದಾರೆಂದೂ ಮಾಹಿತಿ ಲಭ್ಯವಾಗಿದೆ. ವಿದ್ಯುತ್‌ ಕಂಬ ಮುರಿತಕ್ಕೊಳಗಾಗಿ ನೇತಾಡಿಕೊಂಡಿದ್ದ ವಿದ್ಯುತ್‌ ತಂತಿಗಳು ಅದೇ ದಾರಿಯಲ್ಲಿ ಬರುತ್ತಿದ್ದ ಬೈಕ್‌ ಸವಾರನಿಗೆ ತಾಗಿದ್ದು, ಅವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುಗಳು ಬೆಳ್ತಂಗಡಿ ಮೂಲದವರೆಂದೂ ತಿಳಿದುಬಂದಿದೆ. ಹೆಚ್ಚಿನ ಮಾಹಿತಿಗಾಗಿ ಇನ್ನಷ್ಟೆ ಲಭ್ಯವಾಗಬೇಕಿಗಿದೆ.






 

error: Content is protected !!
Scroll to Top