ದಲಿತ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಭೂಪ ➤ ಇತ್ತ ಹಾಥರಸ್​ ಘಟನೆ ಖಂಡಿಸಿ ತಂದೆಯ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.07: ಹಾಥರಸ್​ನಲ್ಲಿ ನಡೆದಿದ  ಗ್ಯಾಂಗ್​ರೇಪ್​ ಘಟನೆಯನ್ನು ಖಂಡಿಸಿ ಎಸ್​ಡಿಪಿಐ ಸಂಘಟನೆಯ ಮುಖಂಡನೊಬ್ಬ ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ಆತನ ಮಗ ದಲಿತ ಯುವತಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧನವಾಗಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು  ಮಹಮ್ಮದ್‌ ಫೈಝಲ್‌ ಎಂದು ಗುರುತಿಸಲಾಗಿದೆ. ಈತ ಪುತ್ತೂರಿನ ಚಿಕ್ಕಮುಡ್ನೂರು ಗ್ರಾಮದ ನಿವಾಸಿ. ಪೈಝಲ್​ಗೆ ಆಂಧ್ರ​ ಮೂಲದ ಯುವತಿಯೊಬ್ಬಳು ಇನ್​ಸ್ಟಾಗ್ರಾಂ ಮೂಲಕ ಪರಿಚಯವಾಗಿ, ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿ ದೈಹಿಕ ಸಂಬಂಧಕ್ಕೂ ಅಲ್ಲದೆ, ಯುವತಿಯ ಭಾವಚಿತ್ರಗಳನ್ನು ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿ, ಕಿರುಕುಳ ನೀಡಿರುವ ಆರೋಪವೂ ಕೇಳಿಬಂದಿದೆ. ಈತನ್ನು ಕಳೆದ ದಿನವಷ್ಟೆ  ಆಂಧ್ರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಇನ್ನೊಂದೆಡೆ ಪೈಝಲ್​ ತಂದೆ ಅಬ್ದುಲ್ ಹಮೀದ್ ಸಾಲ್ಮರ ಎಸ್​ಡಿಪಿಐ ಸಂಘಟನೆಯ ಮುಖಂಡನಾಗಿದ್ದು, ಹಾಥರಸ್​ನಲ್ಲಿ ನಡೆದಿದೆ ಎನ್ನಲಾದ ಗ್ಯಾಂಗ್​ರೇಪ್​ ಘಟನೆಯನ್ನು ಖಂಡಿಸಿ ನಿನ್ನೆ ಪ್ರತಿಭಟನೆ ನಡೆಸುತ್ತಿದ್ದರು. ಇದರ ನಡುವೆ ಮಗನನ್ನು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿಸಿರುವುದು ಪೇಚಿಗೆ ಮುಜುಗರಕ್ಕೀಡುಮಾಡಿದೆ.

Also Read  ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಯೋಜನೆ ಜಾರಿ ➤ ಸಿಎಂ ಬೊಮ್ಮಾಯಿ

error: Content is protected !!
Scroll to Top