ಕಡಬ: ಹತ್ರಾಸ್‌ ಪ್ರಕರಣ ➤ ಸೂಕ್ತ ತನಿಖೆಗೆ ದಲಿತ ಸಂಘರ್ಷ ಸಮಿತಿಯಿಂದ ರಾಷ್ಟ್ರಪತಿಯವರಿಗೆ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಅ.06: ಉತ್ತರ ಪ್ರದೇಶದಲ್ಲಿ ನಡೆದ ದಲಿತ ಯುವತಿಯ ಕೊಲೆಯನ್ನು ಖಂಡಿಸಿ, ಪ್ರಕರಣವನ್ನು ಸೂಕ್ತ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಡಬ ತಾಲೂಕು ಸಂಘಟನೆಯು ತಹಶೀಲ್ದಾ ರ್‌ ಮೂಲಕ ಇಂದು ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.

 

 

ಉತ್ತರ ಪ್ರದೇಶ ಪೊಲೀಸ್‌ ಇಲಾಖೆ ಮತ್ತು ಜಿಲ್ಲಾಡಳಿತ ಕ್ರಮಗಳು ಆರೋಪಿಗಳನ್ನು ರಕ್ಷಣೆ ಮಾಡಿರುವಂತೆ ಅನುಮಾನ ಮೂಡಿದೆ. ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಮರಣ ದಂಡನೆಯನ್ನು ವಿಧಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ವೇಳೆ ಸಂಘಟನೆಯ ಸಂಚಾಲಕ ವಸಂತ ಕುಬುಲಾಡಿ, ಮಹಿಳಾ ಸಂಚಾಯಕಿ ಸುಂದರಿ ಸುರೇಶ್‌ ಸೇರಿದಂತೆ ಸಂಘಟನಾ ಸಂಚಾಲಕರು ಉಪಸ್ಥಿತರಿದ್ದರು.

Also Read  ಬಂಟ್ವಾಳ: ಪಾದಾಚಾರಿ ಮಹಿಳೆಗೆ ಬೈಕ್ ಢಿಕ್ಕಿ- ಮೃತ್ಯು

 

error: Content is protected !!
Scroll to Top