ಕಾಳಿಂಗ ಸರ್ಪದ ಹಣೆಗೆ ಮುತ್ತಿಟ್ಟ ಅರ್ಜುನ್ ➤ ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಅ.06: ಕಾಳಿಂಗ ಸರ್ಪವನ್ನು ಕಂಡರೆ ಜನ ಬೆಚ್ಚಿಬೀಳುತ್ತಾರೆ. ಕಾಳಿಂಗ ಸರ್ಪ ಕಂಡ ಕೂಡಲೇ ಎದ್ನೋ ಬಿದ್ನೋ ಎಂದು ಓಡುತ್ತಾರೆ. ಆದರೆ, ಕಾಳಿಂಗ ಸರ್ಪವನ್ನು ಮಗುವಂತೆ ಆಡಿಸಿ, ಅದರ ಹೆಣೆಗೆ ಮುತ್ತಿಡುವುದು ಬಹುಶಃ ಕನಸಲ್ಲೂ ಆಗದ ಮಾತು. ಆದರೆ, ಇಲ್ಲೊಬ್ಬ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಸ್ನೇಕ್ ಅರ್ಜುನ್ ನೋಡುವವರಿಗೆ ಎದೆಯಲ್ಲಿ ಭಯ ಹುಟ್ಟುವಂತೆ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಸುಗೂಸಿನಂತೆ ಆಡಿಸಿ, ಅದರ ಹಣೆಗೆ ಮುತ್ತಿಟ್ಟಿದ್ದಾರೆ.

 

 

ಮಲೆನಾಡಲ್ಲೂ ಅತ್ಯಂತ ವಿಷಕಾರಿ ಹಾಗೂ ಮೋಸ್ಟ್ ಡೇಂಜರ್ ಸ್ನೇಕ್ ಕಾಳಿಂಗ ಸರ್ಪವನ್ನು ಮಗುವಂತೆ ಆಡಿಸಿ, ಹಣೆಗೆ ಮುತ್ತಿಕ್ಕುವ ಧೈರ್ಯವಂತರು ಇದ್ದಾರೆಂದು ಸ್ಥಳೀಯರು ಸ್ನೇಕ್ ಅರ್ಜುನ್ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಭಯ ಕೂಡ ಪಟ್ಟಿದ್ದಾರೆ. ಅಂಥದರಲ್ಲಿ ಸ್ನೇಕ್ ಅರ್ಜುನ್ ಹಾವನ್ನು ಸೆರೆ ಹಿಡಿದು, ಆಡಿಸಿ, ಹಣೆಗೆ ಮುತ್ತಿಕ್ಕಿ ಕಾಡಿಗೆ ಬಿಟ್ಟಿದ್ದಾರೆ. ಕಾಡಿಗೆ ಬಿಡುವ ಮುನ್ನ ಕಿಂಗ್ ಕೋಬ್ರಾದ ಜೊತೆ ಈ ಉರಗ ಪ್ರೇಮಿ ನಡೆಸಿರುವ ಭಯಾನಕ ಸೆಣಸಾಟ ಜನರನ್ನು ಬೆಚ್ಚಿ ಬೀಳಿಸುವಂತಿದೆ.ಹೀಗೆ ಕಾಳಿಂಗನ ಹಣೆಗೆ ಉರಗ ಪ್ರೇಮಿ ಸಿಹಿ ಮುತ್ತನ್ನಿಟ್ಟಿರೋ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ಈಗಾಗಲೇ ನೂರಾರು ಹಾವುಗಳ ಜೊತೆ ಹತ್ತಾರು ಕಿಂಗ್ ಕೋಬ್ರಾ ಸೇರಿದಂತೆ ವಿಷಕಾರಿ ಹಾವುಗಳನ್ನು ಸೆರೆಹಿಡಿದಿರುವ ಸ್ನೇಕ್ ಅರ್ಜುನ್, ತಾವು ಹಾವು ಹಿಡಿಯೋದರಲ್ಲಿ ನಿಸ್ಸೀಮ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

Also Read  ಬಂಟ್ವಾಳ: ವ್ಯಕ್ತಿ ನಾಪತ್ತೆ.! ಪತ್ತೆಗಾಗಿ ಕುಟುಂಬಸ್ಥರ ಮನವಿ

error: Content is protected !!
Scroll to Top